ಭಾರತ ಆಹಾರ ನಿಗಮವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯಡಿಯಲ್ಲಿ ರಾಜ್ಯಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ನಿರಂತರವಾಗಿ ಪೂರೈಸುತ್ತಿದೆ.ಆ ಮೂಲಕ ಕರ್ನಾಟಕದಲ್ಲಿ ಆಹಾರ ನಿಗಮ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ.
ಇದರೊಂದಿಗೆ ಭಾರತ ಸರ್ಕಾರವು ಇತ್ತಿಚಿಗೆ ಘೋಷಿಸಿರುವ
(PMGKAY) ಯಡಿಯಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ರಾಜ್ಯದ ಸುಮಾರು 4 ಕೋಟಿ ಫಲಾನುಭವಿಗಳಿಗೆ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ರಾಜ್ಯ ಸರ್ಕಾರದಿಂದ ಪಡಿತರ ಚೀಟಿಗಳನ್ನು ನೀಡಲಾಗಿದೆ ಆದರೆ ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಡದ ಫಲಾನುಭವಿಗಳಿಗೆ ಮೂರು ತಿಂಗಳವರೆಗೆ ಪ್ರತಿ ವ್ಯಕ್ತಿಗೆ ಇನ್ನೂ 5 ಕಿಲೋ ಆಹಾರ ಧಾನ್ಯಗಳನ್ನು ನೀಡಲಾಗಿದೆ. ಆದ್ದರಿಂದ, ರಾಜ್ಯದ ಎಲ್ಲಾ ಕಾರ್ಡ್ ಹೊಂದಿರುವವರು ಅರ್ಹರಾಗಿರುತ್ತಾರೆ ಈ ಮೂರು ತಿಂಗಳು ಹೆಚ್ಚುವರಿ 5 ಕಿಲೋಗಳನ್ನು ಸ್ವೀಕರಿಸಲು.ಈ ಕಾರ್ಯ ನಿರ್ವಹಿಸುವುದಕ್ಕಾಗಿ, ಭಾರತ ಆಹಾರ ನಿಗಮವು ರಾಜ್ಯಾದ್ಯಂತ ಹರಡಿರುವ ತನ್ನೆಲ್ಲಾ 71 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3000 ಕಾರ್ಮಿಕ ಮತ್ತು ಇತರೆ ಸಾರಿಗೆ ವ್ಯವಸ್ಥೆ ಸಲಕರಣೆಗಳನ್ನು ಜಾಗೃತಗೊಳಿಸಿ ಬೇರೆ ರಾಜ್ಯಗಳಿಂದ ಅಗತ್ಯವಾದ ಅಕ್ಕಿ ಮತ್ತು ಗೋಧಿಯನ್ನು ರೈಲ್ವೆ ಗಾಡಿಗಳ ಮೂಲಕ ರಾಜ್ಯದ ಗೋದಾಮುಗಳಿಗೆ ಸಾಗಿಸುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ಅಕ್ಕಿ ಮತ್ತು ಗೋಧಿಯನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಸರಬರಾಜು ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಭಾರತ ಆಹಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ.ವಿ.ಪ್ರಸಾದ್ “ಭಾರತ ಆಹಾರ ನಿಗಮವು 538.19 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಗೋದಾಮುಗಳಲ್ಲಿ ಸಂಗ್ರಹಿಸಿದೆ. ಇದರಲ್ಲಿ 301.73 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು, 236.46 ಲಕ್ಷ ಮೆಟ್ರಿಕ್ ಟನ್ ಗೋಧಿ ಇದೆ . ಈ ಲಾಕ್ ಡೌನ್ ಸಮಯದಲ್ಲಿ ಭಾರತ ಆಹಾರ ನಿಗಮವು ಗಣನೀಯ ಪ್ರಮಾಣದ 17.56 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು 08.46 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಸುಮಾರು 26 ಎಲ್ಎಂಟಿ ಹೆಚ್ಚುವರಿ ಉತ್ಪಾದಿಸುವ ರಾಜ್ಯಗಳಿಂದ ಕೊರತೆಯಿರುವ ರಾಜ್ಯಗಳಿಗೆ 929 ರೈಲ್ವೆ ಗಾಡಿಗಳಲ್ಲಿ ಸಾಗಾಟ ಮಾಡಲಾಗಿದೆ.
ಈ ಲಾಕ್ ಡೌನ್ ಸಮಯದಲ್ಲಿ, ಭಾರತ ಆಹಾರ ನಿಗಮವು 49 ಲಕ್ಷ ಬ್ಯಾಗ್ (50 Kg) ಗಳನ್ನು 87 ರೈಲ್ವೆ ಗಾಡಿಗಳಲ್ಲಿ ಕರ್ನಾಟಕಕ್ಕೆ ಸಾಗಿಸಲಾಗಿದೆ ಮತ್ತು 55 ಲಕ್ಷ ಅಕ್ಕಿ ಬ್ಯಾಗ್ ಗಳನ್ನು ಮತ್ತು 9 ಲಕ್ಷ ಗೋಧಿ ಬ್ಯಾಗ್ ಗಳನ್ನು ರಾಜ್ಯಕ್ಕೆ ಸಾರ್ವಜನಿಕ ವಿತರಣೆಗಾಗಿ ಪೂರೈಕೆ ಮಾಡಲಾಗಿದೆ. ಇನ್ನೂ ಭಾರತ ಆಹಾರ ನಿಗಮವು 6.4 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ತನ್ನ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದೆ. ಮೇಲಾಗಿ ಭಾರತ ಆಹಾರ ನಿಗಮವು ಸರ್ಕಾರದ ಎಲ್ಲಾ ನಿಯಮಗಳನ್ನು ಮತ್ತು ಸೋಶಿಯಲ್ ಡಿಸ್ಟೆನ್ಸ್ ಅನ್ನು ಪಾಲಿಸಿಕೊಂಡು ರಾಜ್ಯಕ್ಕೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಪೂರೈಸಲಿದೆ.ಭಾರತ ಸರ್ಕಾರವು ಮತ್ತೊಂದು ಫಲಾನುಭವಿ ಯೋಜನೆಯನ್ನು ಜಾರಿಗೊಳಿಸಿದ್ದು ಇದರ ಮೂಲಕ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ದತ್ತಿ ಸಂಸ್ಥೆಗಳು ಭಾರತದ ಆಹಾರ ನಿಗಮದ ಮೂಲಕ ಅಕ್ಕಿ ಪ್ರತಿ ಕೆಜಿಗೆ ರೂ 22ಮತ್ತು ಗೋಧಿ ರೂ 21 ಬೆಲೆಗೆ ಖರೀದಿಸಿ ವಲಸೆ ಕಾರ್ಮಿಕರಿಗೆ ಮತ್ತು ದುರ್ಬಲ ವರ್ಗದವರಿಗೆ ಬಿಸಿಯೂಟ ವ್ಯವಸ್ಥೆ ಮಾಡಬಹುದಾಗಿದೆ. ಆದಕಾರಣ ಅವರು ಸಂಬಂಧಪಟ್ಟವರಿಗೆ ಇದರ ಸದುಪಯೋಗ ಪಡೆದುಕೊಳ್ಳಲು ಹತ್ತಿರದ ಜಿಲ್ಲಾ ಕಾರ್ಯಾಲಯಗಳಿಗೆ ಭೇಟಿಯಾಗಲು ಮನವಿ ಮಾಡಿದ್ದಾರೆ. ಈ ವ್ಯವಸ್ಥೆಯಿಂದ ಎಲ್ಲಾ ವರ್ಗದವರಿಗೂ ಆಹಾರ ತಲುಪುತ್ತಿದ್ದು ಭಾರತೀಯ ಆಹಾರ ನಿಗಮವು ಯಾರೂ ಹಸಿವಿನಿಂದ ಬಳಲದಂತೆ ಮಾಡಿದೆ.








