Football | ಸುನೀಲ್ ಛೆಟ್ರಿ ಖಾತೆಯಲ್ಲಿ ಅಪರೂಪದ ದಾಖಲೆ
ಫುಟ್ ಬಾಲ್ ಸ್ಟಾರ್ ಭಾರತ ಫುಟ್ ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಛೆಟ್ರಿ ಅಪರೂಪದ ಸಾಧನೆ ಮಾಡಿದ್ದಾರೆ.
ಏಸಿಎಫ್ ಏಷ್ಯಾ ಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಸುನಿಲ್ 45ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.
ಈ ಗೋಲ್ ಛೆಟ್ರಿಯ 84 ನೇ ಅಂತರಾಷ್ಟ್ರೀಯ ಗೋಲ್ ಆಗಿರೋದು ವಿಶೇಷವಾಗಿದೆ.
ಈ ಹಿನ್ನೆಲೆಯಲ್ಲಿ ಹಂಗೇರಿ ಫುಟ್ ಬಾಲ್ ದಿಗ್ಗಜ ಫೆರೆಂಕ್ ಪುಸ್ಕಾಸ್ ಗೆ ಸರಿಸಮನಾಗಿ ಅಗ್ರ-5 ರಲ್ಲಿ ಸ್ಥಾನ ಪಡೆದಿದ್ದಾರೆ.
ಹಂಗೇರಿ ಪರ ಪುಸ್ಕಾಸ್ 84 ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ.

ಮೊದಲ ನಾಲ್ಕರಲ್ಲಿ ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (117 ಗೋಲು) ಮೊದಲ ಸ್ಥಾನದಲ್ಲಿದ್ದಾರೆ.
ಇರಾನ್ ನ ಅಲಿ ಡೈ (109 ಗೋಲು) ಎರಡನೇ ಸ್ಥಾನದಲ್ಲಿದ್ದರೆ, ಮೊಖ್ತಾರ್ ದಹಾರಿ (89 ಗೋಲು) ಮೂರನೇ ಸ್ಥಾನದಲ್ಲಿದ್ದಾರೆ.
ಮೆಸ್ಸಿ 86 ಗೋಲ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನು ಮೆಸ್ಸಿ ಮತ್ತು ಸುನಿಲ್ ಛೆಟ್ರಿ ನಡುವಿನ ಗೋಲುಗಳ ವ್ಯತ್ಯಾಸ ಕೇವಲ ಎರಡು.
ಅಂತರಾಷ್ಟ್ರೀಯ ಫುಟ್ ಬಾಲ್ ನಲ್ಲಿ ಹೆಚ್ಚು ಗೋಲ್ ಬಾರಿಸಿದ ಟಾಪ್ 10 ರ ಪಟ್ಟಿಯಲ್ಲಿ ರೊನಾಲ್ಡೊ, ಮೆಸ್ಸಿ, ಸುನಿಲ್ ಛೆಟ್ರಿ ಮತ್ತು ಅಲಿ ಮೊಬ್‌ಕೂಟ್ (80 ಗೋಲುಗಳು, ಯುಎಇ) ಮಾತ್ರ ಆಡುತ್ತಿದ್ದಾರೆ.








