ರಾಬರ್ಟ್ ಚಾಲೆಂಜಿoಗ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ. ಈ ಚಿತ್ರಕ್ಕಾಗಿ ದಚ್ಚು ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾದುಕುಳಿತ್ತಿದ್ದರು. ಆದ್ರೆ ಕೊರೊನಾದಿಂದಾಗಿ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಲೇ ಇದೆ.
ಮೇ 1ಕ್ಕೆ ರಿಲೀಸ್ ಆಗಬೇಕಿತ್ತು ‘ರಾಬರ್ಟ್’..!
ರಾಬರ್ಟ್ ಸಿನಿಮಾ ಬಗ್ಗೆ ಗಾಂಧಿನಗರದಲ್ಲಿ ಭಾರೀ ನಿರೀಕ್ಷೆಯಿದೆ. ಎಲ್ಲಾ ಸರಿಯಾಗಿದ್ರೆ ಏಪ್ರಿಲ್ 9 ರಂದು ರಿಲೀಸ್ ಆಗಬೇಕಿತ್ತು.. ಲಾಕ್ ಡೌನ್ ಇರೋದ್ರಿಂದ ಮೇ 1 ರಂದು ರಿಲೀಸ್ ಮಾಡೋಣ ಅಂತಾ ಚಿತ್ರತಂಡ ಫಿಕ್ಸ್ ಆಗಿತ್ತು. ಆದ್ರೆ ಇವತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 3ರ ತನಕ ಲಾಕ್ ಡೌನ್ ವಿಸ್ತರಿಸಲಾಗಿದೆ ಅಂತಾ ತಿಳಿಸಿದರು. ಇದರಿಂದಾಗಿ ರಾಬರ್ಟ್ ಬಿಡುಗಡೆಯೂ ಸಹ ಮುಂದಕ್ಕೆ ಹೋಗಿದೆ.
ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ‘ ಮೇ 1 ರಂದು ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದ್ದೆವು. ಆದ್ರೆ ಲಾಕ್ ಡೌನ್ ವಿಸ್ತರಣೆ ಆಗಿರೋದ್ರಿಂದ ರಿಲೀಸ್ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿಲ್ಲ. ಕೊರೊನಾ ಎಫೆಕ್ಟ್ ನೋಡಿಕೊಂಡು ಡೇಟ್ ಫಿಕ್ಸ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.