ದೇಶ ಹಾಗೂ ರಾಜ್ಯವನ್ನು ಇನ್ನಿಲ್ಲದಂತೆ ಕಾಡಿರುವ ಕೊರೊನಾ ಹೆಮ್ಮಾರಿ ದಿನೇ ದಿನೇ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದರ ನಡುವೆ ದಿನೇ ದಿನೇ ಸೋಂಕಿತರ ಜೊತೆಗೆ ಮೃತರ ಸಂಖ್ಯೆಯಲ್ಲು ಏರಿಕೆಯಾಗ್ತಿದೆ. ಇದೀಗ ರಾಜ್ಯಾದ್ಯಂತ ಕೊರೊನಾ ನಿರ್ಮೂಲನೆಗೆ ಸರ್ಕಾರ, ಜಿಲ್ಲಾಡಳಿತ, ಪಾಲಿಕೆ ಹರಸಹಾಸಪಡ್ತಿದ್ದು, ಕೊರೊನಾ ರೂಲ್ಸ್ ಬ್ರೇಕ್ ಮಾಡ್ತಿರುವ ಜನರಿಗೆ ಬಿಸಿ ಮುಟ್ಟಿಸಲು ಪೊಲೀಸರು ಸಜ್ಜಾಗಿದ್ದಾರೆ.

ರಾಯಚೂರಿನಲ್ಲೂ ಸದಿನೇ ದಿನೇ ಕೋವಿಡ್ ಹಾವಳಿ ಹೆಚ್ಚಾಗ್ತಿರುವ ಬೆನ್ನಲ್ಲೇ ಜಿಲ್ಲೆಯನ್ನು ಲಾಕ್ ಡೌನ್ ಮಾಡಲಾಗಿದೆ. ಈ ಲಾಕ್ ಡೌನ್ ಸಮಯದಲ್ಲಿ ಸುಖಾಸುಮ್ಮನೆ ಬೀದಿಗಿಳಿದವರನ್ನು ಕ್ಲಾಸ್ ತೆಗೆದುಕೊಳ್ಲಲು ಖಾಕಿ ಪಡೆ ಸಜ್ಜಾಗಿದೆ. ಕೊರೊನಾ ನಿರ್ಮೂಲನೆಗೆ ಪಣ ತೊಟ್ಟಿರುವ ರಾಯಚೂರು ಪೊಲೀಸರು ರೂಲ್ಸ್ ಫಾಲೋ ಮಾಡದೆ ಬೇಕಾಬಿಟ್ಟಿ ರಸ್ತೆಗಳಲ್ಲಿ ಓಡಾಟ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದು, ಸವಾರರ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.








