ಸಂಪುಟ ವಿಸ್ತರಣೆಗೆ ತೆರೆ ಎಳೆದ ಸಿಎಂ ಬೊಮ್ಮಾಯಿ Saaksha Tv
ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರ ಪಕ್ಷದ ವರಿಷ್ಠರ ಗಮದಲ್ಲಿದ್ದು, ಕರೆದಾಗ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿರು.
ಕೆಲ ದಿನಗಳಿಂದ ಸಂಪುಟ ವಿಸ್ತರಣೆಯಾಗಬೇಕು, ಚುನಾವಣೆಗೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಇದೆ. ಆದಷ್ಟು ಬೇಗ ವಿಸ್ತರಣೆಯಾಗಬೇಕು. ನಮಗೆ ಸಚಿವರಾಗಲು ಅರ್ಹತೆ ಇಲ್ಲವಾ? ಸಂಪುಟದಲ್ಲಿ ಸಚಿವ ಸ್ಥಾನ ಖಾಲಿ ಇದೆ. ಒಬ್ಬರಿಗೆ ಹೆಚ್ಚಿರುವರಿಯಾಗಿ ನೀಡಿದ್ದಾರೆ. ಈಗಲೇ ಸಂಪುಟ ವಿಸ್ತರಣೆ ಆಗಬೇಕು ಎಂದು ಕೆಲವು ಶಾಸಕರು ಪಟ್ಟು ಹಿಡಿದಿದ್ದರು. ಆದರೆ ಸಿಎಂ ಇದಕ್ಕೆ ತೆರೆ ಎಳೆದಿದ್ದಾರೆ.
ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದೆ. ಅದು ನನ್ನ ಗಮನದಲ್ಲಿದೆ. ವರಿಷ್ಠರೂ ಕೂಡಾ ಇದನ್ನು ಗಮನಿಸಿದ್ದಾರೆ. ಅವರು ಕರೆದಾಗ ದೆಹಲಿಗೆ ತೆರಳಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಬೊಮ್ಮಾಯಿ ಅವರ ಈ ಹೇಳಿಕೆಯಿಂದ ಸದ್ಯಕ್ಕೆ ಸಂಪುಟ ವಿಸ್ತರಣೆಗೆ ತೆರೆ ಬಿದ್ದಂತಾಗಿದೆ. ಫೆಬ್ರವರಿಯಲ್ಲಿ ಅಧಿವೇಶನ ಮುಂದುವರೆಯಲ್ಲಿದ್ದು, ಸಧ್ಯ ಸಿಎಂ ಬಜೆಟ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಪಂಚರಾಜ್ಯಗಳ ಚುನಾವಣೆ ಫೆಬ್ರವರಿ 10ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲಲು ಹೈಕಮಾಂಡ್ ಶತಾಯಗತಾಯ ಕಸರತ್ತು ನಡೆಸುತ್ತಿದೆ. ಹೀಗಾಗಿ ಸಂಪುಟ ವಿಸ್ತರಣೆ ಏಪ್ರೀಲ್ ಬಳಿಕವೆ ನಡೆಯುವ ಸಾದ್ಯತೆ ಇದೆ.