ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಡಿಜೆ ಹಳ್ಳಿ ಗಲಭೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಶಾಸಕ ರಾಮದಾಸ್ ಪ್ರತಿಕ್ರಿಸಿ ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಮದಾಸ್, ಡಿ.ಜೆ ಹಳ್ಳಿಯ ಗಲಭೆ ನಡೆದ ಜಾಗಕ್ಕೆ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದ್ದಾರೆ. ಅವರು ಇನ್ನೂ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆಯೇ ಹೊರತು ತಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಈ ರೀತಿ ಆಯಿತಲ್ಲ ಎಂದು ಮರುಕ ವ್ಯಕ್ತ ಪಡಿಸಲಿಲ್ಲ.! ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ? ಎಂದು ಬರೆದುಕೊಂಡಿದ್ದಾರೆ.
ಇಂದು ಮಾಜಿ ಸಿಎಂ ಸಿದ್ದರಾಮ್ಯಯ ಅವರು, ಡಿ.ಜೆ ಹಳ್ಳಿಯ ಗಲಭೆ ನಡೆದ ಜಾಗಕ್ಕೆ ಭೇಟಿ ನೀಡಿದ್ದರು. ಈ ಕುರಿತು ಫೋಟೋಗಳನ್ನು ಟ್ವೀಟ್ ಮಾಡಿದ್ದರು.








