ನವದೆಹಲಿ: ಫೋರ್ಬ್ಸ್ ವಿಶ್ವ ಶ್ರೀಮಂತ ವ್ಯಕ್ತಿಗಳ ಪಟ್ಟಿ ಮಾಡಿದ್ದು, ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ 9.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮೊದಲ ಬಾರಿಗೆ ಅಗ್ರ 10ರ ಒಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ಈ ಮೂಲಕ ಅವರು ದೇಶದ ಶ್ರೀಮಂತ ವ್ಯಕ್ತಿ ಎಂಬ ಕೀರ್ತಿ ಗಳಿಸಿದ್ದಾರೆ. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ 6.9 ಲಕ್ಷ ಕೋಟಿ ರು. ಮೌಲ್ಯದೊಂದಿಗೆ 17ನೇ ಸ್ಥಾನ ಪಡೆದು, ದೇಶದ ಎರಡನೇ ಶ್ರೀಮಂತರಾಗಿದ್ದಾರೆ. ಎಲ್ವಿಎಂಎಚ್ ಮುಖ್ಯಸ್ಥ ಬೆರ್ನಾಲ್ಡ್ ಅರ್ನಾಲ್ಟ್ 18.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಜಾಗತಿಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನಂತರ ಕ್ರಮವಾಗಿ ಎಲಾನ್ ಮಸ್ಕ್ (16.18 ಲಕ್ಷ ಕೋಟಿ ), ಜೆಫ್ ಬೆಜೋಜ್ (16.10 ಲಕ್ಷ ಕೋಟಿ ರು.), ಮಾರ್ಕ್ ಜುಕರ್ಬರ್ಗ್ (14.6 ಲಕ್ಷ ಕೋಟಿ ರು.) ಸ್ಥಾನ ಪಡೆದಿದ್ದಾರೆ.
ಈ ಪಟ್ಟಿಯಂತೆ ಫ್ರೆಂಚ್ ಉದ್ಯಮಿ ಬೆರ್ನಾಡ್ ಅರ್ನಾಲ್ಟ್ ಮತ್ತು ಕುಟುಂಬ ಅತ್ಯಂತ ಶ್ರೀಮಂತ ಎನಿಸಿದ್ದು, 233 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದೆ. ಬೆರ್ನಾಡ್ ಅರ್ನಾಲ್ಟ್ ಎಲ್ವಿಎಂಹೆಚ್ನ ಮುಖ್ಯಸ್ಥರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಎಲಾನ್ ಮಸ್ಕ್ ಇದ್ದಾರೆ. ಎಲಾನ್ ಮಸ್ಕ್ ನೆಟ್ವರ್ತ್ 195 ಬಿಲಿಯನ್ ಡಾಲರ್, ಮೂರನೇ ಸ್ಥಾನದಲ್ಲಿ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಇದ್ದಾರೆ. ಇವರ ನಿವ್ವಳ ಮೌಲ್ಯವೂ ಕೂಡ 195 ಬಿಲಿಯನ್ ಡಾಲರ್ ಆಗಿದೆ. ನಂತರ ಫೇಸ್ಬುಕ್ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇದ್ದು, ಮೌಲ್ಯ 177 ಬಿಲಿಯನ್ ಡಾಲರ್ ಆಗಿದೆ.