ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿಗಳಿಗಿಲ್ಲ ಅಹ್ವಾನ
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಯಾವುದೇ ಮುಖ್ಯ ಅತಿಥಿಗಳಾಗಿ ವಿದೇಶಿ ರಾಷ್ಟ್ರದ ಮುಖ್ಯಸ್ಥರು ಆಗಮಿಸುವುದಿಲ್ಲ ಎಂದು ವರದಿಯಾಗಿದೆ.
ಕೋವಿಡ್ ಒಮಿಕ್ರಾನ್ ಮೂರನೇ ಅಲೆ ದಿನೆ ದಿನೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಯಾವುದೇ ವಿದೇಶಿ ಗಣ್ಯರನ್ನ ಅಹ್ವಾನಿಸಿಲ್ಲ ಎಂದು ತಿಳಿದುಬಂದಿದೆ. ಕಳೆದ ವರ್ಷವು ಕೋವಿಡ್ ಭೀತಿಯಿಂದ ಯಾವುದೇ ವಿದೇಶಿ ಅತಿಥಿಗೆ ಅಹ್ವಾನ ನೀಡಿರಲಿಲ್ಲ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲೂ ಗಣನೀಯ ಕಡಿತಗೊಳಿಸಲಾಗಿದೆ. ಗಣರಾಜ್ಯೋತ್ಸವದ ಬಳಿಕ ಅಂದರೆ ಜನವರಿ 27 ರಂದು ಮೋದಿ ಭಾರತ ಹಾಗು ಮಧ್ಯ ಏಷ್ಯದ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.








