ಕರಡಿ ಕೊಂದು ಮಾಂಸ ಭಕ್ಷಿಸಿದ 6 ಮಂದಿ ಬಂಧನ
ಕರಡಿಯನ್ನೆ ಕೊಂದು ಮಾಂಸ ಭಕ್ಷಿಸಿದ ಆರೋಪದ ಮೇಲೆ ತುಮಕೂರು ಜಿಲ್ಲೆ ಕೊರಟಗೆರೆಯ ತಾಲೋಕಿನ ಐವರು ಆರೋಪಿಗಳನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಕೊರಟಗೆರೆ ತಾಲೋಕಿನ ಗೌಜಗಲ್ಲು ಗ್ರಾಮದ ಜಿ ಎನ್ ಸತೀಶ ನಾಗರಾಜ್ ಶ್ರೀಧರ ರಾಮಯ್ಯ ಮತ್ತು ರಾಜಣ್ಣ ಬಂಧಿತ ಆರೋಪಿಗಳು.
ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 2(20) 9 39 ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಗೋವಿಂದಪ್ಪ ಎಂಬುವವರ ಜಮೀನಿನ ಮೇಲೆ ದಾಳಿ ಮಾಡಿದಾಗ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನ ಕತ್ತರಿಸಿರುವುದು ಬೆಳಕಿಗೆ ಬಂದಿದೆ, ಸ್ಥಳದಲ್ಲಿ ಕರಡಿಯ ಕತ್ತರಿಸಿರುವ ಮುಂಗಾಲು ನಾಲಿಗೆ ಮತ್ತು ತುಂಡಾಗಿರುವ ಬಾಲ ಪತ್ತೆಯಾಗಿದೆ.
ಚಿಕ್ಕ ಬಸವಯ್ಯ ಬುವವರ ಮನೆಯಲ್ಲಿ 50 ಕೆಜಿ ಕರಡಿ ಮಾಂಸವನ್ನ ವಶಕ್ಕೆ ಪಡೆದಿದ್ದಾರೆ.