ಬೆಂಗಳೂರು: ಕೋವಿಡ್-19 (Covid-19 Scam Case) ಅಕ್ರಮದ ತನಿಖೆಗೆ ರಾಜ್ಯ ಸರ್ಕಾರ SIT ತನಿಖೆಗೆ ಅಸ್ತು ಎಂದಿದೆ.
ಈ ಹಿನ್ನೆಲೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಜಸ್ಟೀಸ್ ಮೈಕಲ್ ಡಿ ಕುನ್ಹಾ ಅವರ ಮಧ್ಯಂತರ ವರದಿ ಆಧರಿಸಿ ಅಕ್ರಮದ ತನಿಖೆಗೆ SIT ತನಿಖೆಗೆ ನಡೆಸದಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಕ್ಯಾಬಿನೆಟ್ ಸಭೆ ಮುಗಿದ ನಂತರ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಕೆ.ಪಾಟೀಲ್, ಕುನ್ಹಾ ಆಯೋಗ 11 ಸಂಪುಟಗಳಲ್ಲಿ ವರದಿ ಸಲ್ಲಿಸಿದೆ. 7223.64 ಕೋಟಿ ಮೊತ್ತದ ಅಕ್ರಮ ಆಗಿರೋ ಕುರಿತು ತನಿಖೆ ನಡೆಯುತ್ತಿದೆ. 55 ಸಾವಿರ ಕಡತಗಳನ್ನ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆದು ಆಯೋಗ ವರದಿ ನೀಡಿದೆ. ಈ ಹಿನ್ನಲೆಯಲ್ಲಿ SIT ರಚನೆಗೆ ಕ್ಯಾಬಿನೆಟ್ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ವಸೂಲಾತಿ ಪ್ರಕ್ರಿಯೆ ಒಳಗೆ ಪಾಲುದಾರರನ್ನ ಬ್ಲ್ಯಾಕ್ ಲಿಸ್ಟ್ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಅಕ್ರಮದಲ್ಲಿ ಯಾರೇ ಶಾಮೀಲಾಗಿದ್ದರೂ, SIT ತನಿಖೆ ಮಾಡುತ್ತೆ ಅಂತಾ ಸಚಿವರು ಹೇಳಿದ್ದಾರೆ.