ಮಂಡ್ಯ : ಮಾಜಿ ಸಿಎಂ ಎಸ್.ಎಂ. ಕೃಷ್ಣ ವಿಧಿವಶರಾಗಿದ್ದು, ನಾಳೆ ಅಂತ್ಯ ಸಂಸ್ಕಾರ ನಡೆಯಲಿದೆ. ಹೀಗಾಗಿ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ.
ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ, ವಿವಿಧ ಪ್ರಗತಿಪರ ಸಂಘಟನೆಗಳು ನಾಳೆ ಬಂದ್ ಗೆ ಕರೆ ನೀಡಿವೆ. ಒಕ್ಕಲಿಗ ಸಂಘ, ದಲಿತ ಸಂಘಟನೆಗಳು, ಬಾರ್ ಎಂಡ್ ರೆಸ್ಟೋರೆಂಟ್ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಈ ಮೂಲಕ ಮುತ್ಸದ್ದಿ ರಾಜಕಾರಣಿಗೆ ಗೌರವ ಸಲ್ಲಿಸಲು ಸಂಘಟನೆಗಳು ಮುಂದಾಗಿವೆ.
ಬುಧವಾರ ಬೆಳಗ್ಗೆ 9ರಿಂದ ಸಂಜೆ ಐದು ಗಂಟೆಯವರೆಗೆ ಬಂದ್ ನಡೆಯಲಿದೆ ಎಂದು ಸಂಘಟನೆಗಳ ನಾಯಕರು ಹೇಳಿದ್ದಾರೆ.








