Siddaramaiah | ನಾವು ಹಿಂದೂ ಪರ ವಿರೋಧವೂ ಅಲ್ಲ.. ಸಮಾನತೆ ಕಾಂಗ್ರೆಸ್ ಧ್ಯೇಯ
ಹಾಸನ : ನಾವು ಹಿಂದೂ ಪರವೂ ಅಲ್ಲ ವಿರೋಧವೂ ಅಲ್ಲ. ಮುಸಲ್ಮಾನ್, ಕ್ರಿಶ್ಚಿಯನ್ ಪರ ವಿರೋಧವಲ್ಲ, ಎಲ್ಲರನ್ನು ಸಮಾನತೆಯಿಂದ ಕಾಣುವುದೇ ನಮ್ಮ ಪಕ್ಷದ ಧ್ಯೇಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಭಳ್ಳಿಯಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ ಸಂಭವಿಸಿದೆ.
ಈ ಸಂಬಂಧ ಹಾಸನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹುಬ್ಬಳ್ಳಿಯಲ್ಲಿ ಯಾರೇ ಗಲಭೆ ಮಾಡಿದರೂ ತಪ್ಪಿತಸ್ಥರು ತಪ್ಪಿತಸ್ಥರೇ.
ನನಗೇ ಆ ಬಗ್ಗೆ ಪೂರ್ಣವಾಗಿ ಗೊತ್ತಿಲ್ಲ, ಆದರೆ ನಿರಾಪರಾಧಿಗಳನ್ನು ಅರೆಸ್ಟ್ ಮಾಡಬಾರದು. ತಪ್ಪು ಮಾಡದವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಪರೋಕ್ಷವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಭ್ರಷ್ಟಾಚಾರ ಮುಚ್ಚಿಹಾಕಲು ಕೋಮುವಾದ ಮುನ್ನಲೆಗೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಮುಚ್ಚಿಕೊಳ್ಳುವ ಸಲುವಾಗಿ ಕೋಮುವಾದ ಮುನ್ನಲೆಗೆ ತರುತ್ತಿದ್ದಾರೆ, ದ್ವೇಷದ ರಾಜಕಾರಣ ಮುನ್ನಲೆಗೆ ತರುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. former-cm-siddaramaiah- reaction communal-tension-in-old-hubballi









