‘ದ್ವೇಷ ರಾಜಕೀಯದ ಕೇಂದ್ರವಾಗುತ್ತಿರುವ ಉತ್ತರಪ್ರದೇಶ’: ಆದಿತ್ಯನಾಥ್‌ಗೆ 104 ಮಾಜಿ ಐಎಎಸ್ ಅಧಿಕಾರಿಗಳ ಪತ್ರ
ನವದೆಹಲಿ: ಉತ್ತರಪ್ರದೇಶ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮತಾಂತರ ತಡೆ ಕಾಯ್ದೆ ವಿರುದ್ಧ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇಂತಹ ನಿರ್ಧಾರಗಳ ಮೂಲಕ ರಾಜ್ಯವನ್ನು ದ್ವೇಷ ರಾಜಕೀಯ, ವಿಭಜನೆ, ಧರ್ಮಾಂಧತೆಯ ಕೇಂದ್ರವಾಗಿ ಪರಿವರ್ತನೆಗೊಳಿಸಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮ್ ರಾವ್ ಹಾಗೂ ಪ್ರಧಾನ ಮಂತ್ರಿ ಅವರ ಮಾಜಿ ಸಲಹೆಗಾರ ಟಿ.ಕೆ.ಎ. ನಾಯರ್ ಸೇರಿದಂತೆ 104 ಮಾಜಿ ಐಎಎಸ್ ಅಧಿಕಾರಿಗಳು ಸಹಿ ಹಾಕಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರೀತಿಸಿದವನೊಂದಿಗೆ ಮದುವೆಯಾಗಿ ಬಂದ ಯುವತಿ ಸಖಿ ಕೇಂದ್ರದಲ್ಲೇ ನೇಣಿಗೆ ಶರಣು..!
ಪತ್ರದಲ್ಲಿ ಕಾನೂನು ಬಾಹಿರ ಆಧ್ಯಾದೇಶವನ್ನು ಕೂಡಲೇ ಹಿಂದೆಗೆಯಬೇಕು ಎಂದು ಆಗ್ರಹಿಸಲಾಗಿದೆ. ಇನ್ನೂ ಒಂದು ಕಾಲದಲ್ಲಿ ಗಂಗಾ-ಯಮುನಾ ನಾಗರಿಕತೆಯ ತೊಟ್ಟಿಲಾಗಿದ್ದ ಉತ್ತರಪ್ರದೇಶ ಈಗ ರಾಜಕೀಯ ದ್ವೇಷ, ವಿಭಜನೆ, ಧರ್ಮಾಂಧತೆಯ ಕೇಂದ್ರವಾಗಿದೆ. ರಾಜ್ಯಾಡಳಿತ ಕೋಮು ವಿಷವನ್ನು ಕಕ್ಕುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಹೇಳಿದ್ದಾರೆ. ಉತ್ತರಪ್ರದೇಶದಾದ್ಯಂತ ಯುವ ಭಾರತೀಯರ ಮೇಲೆ ನಿಮ್ಮ ಆಡಳಿತ ಹೇಯ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








