ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೊನಾ ಪಾಸಿಟೀವ್ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊರೊನಾ ಸೋಂಕು ತಗುಲಿದ್ದು ಕೋವಿಡ್ ಪಾಸಿಟೀವ್ ಬಂದಿದೆ. ವರದಿಗಳ ಪ್ರಕಾರ, ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌರವ್ ಅವರು ಕೋವಿಡ್ ಟೆಸ್ಟ್ ವರದಿ ಸೋಮವಾರ ರಾತ್ರಿ ಪಾಸಿಟಿವ್ ಬಂದಿದೆ. ಸೌಮ್ಯ ರೋಗ ಲಕ್ಷಣಗಳೊಂದಿಗೆ ಇರುವುದರಿಂದ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವರ್ಷದಲ್ಲಿ ಸೌರವ್ ಮೂರನೇ ಭಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜನವರಿಯಲ್ಲಿ, ಗಂಗೂಲಿ ಹೃದಯಾಘಾತದಿಂದ ಬಳಲುತ್ತಿದ್ದರು, ನಂತರ ಅವರು ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಆಂಜಿಯೋಪ್ಲ್ಯಾಸ್ಟಿ ಮಾಡಿದ ಕೆಲವು ದಿನಗಳ ನಂತರ ಸೌರವ್ ಅವರ ಆರೋಗ್ಯ ಹದಗೆಟ್ಟಿತ್ತು, ನಂತರವೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತದನಂತರವೂ ಗಂಗೂಲಿ ನಿರಂತರವಾಗಿ ಕೆಲಸ ಬಿಸಿಸಿಐ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಸೌರವ್ ಗಂಗೂಲಿ ಅವರು ಡಿಸೆಂಬರ್ 24 ರಂದು ಬಾಂಗ್ಲಾ ಸೂಪರ್‌ಸ್ಟಾರ್ ಮತ್ತು ಟಿಎಂಸಿ ಸಂಸದ ದೇವ್ ಅವರ ಇತ್ತೀಚಿನ ಚಿತ್ರ ಟಾನಿಕ್‌ನ ಪ್ರಥಮ ಪ್ರದರ್ಶನಕ್ಕೆ ಹಾಜರಾಗಿದ್ದರು ಮತ್ತು ನುಸ್ರತ್, ಯಶ್, ಬಾಬುಲ್ ಸುಪ್ರಿಯೊ, ಟಿಎಂಸಿ ಶಾಸಕ ಮದನ್ ಮಿತ್ರ ಮುಂತಾದ ಸೆಲೆಬ್ರಿಟಿಗಳೊಂದಿಗೆ ಕಾಣಿಸಿಕೊಂಡಿದ್ದರು.








