ಮಾಜಿ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶದ ಸಚಿವ ಚೇತನ್ ಚೌಹಾಣ್‍ಗೆ ಕೊರೋನಾ ಸೋಂಕು
ಮಾಜಿ ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಉತ್ತರ ಪ್ರದೇಶದ ಸಚಿವ ಚೇತನ್ ಚೌಹಾಣ್ ಅವರು ಕೊರೋನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. 71ರ ಹರೆಯದ ಚೇತನ್ ಚೌಹಾಣ್ ಅವರು ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಚೇತನ್ ಚೌಹಾಣ್ ಅವರು ಕುಟುಂಬಸ್ಥರು ಹೋಮ್ ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಇನ್ನು ಚೇತನ್ ಚೌಹಾಣ್ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಇನ್ನು ಭಾರತದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಮತ್ತು ಆರ್ .ಪಿ. ಸಿಂಗ್ ಕೂಡ ಹಾರೈಸಿದ್ದಾರೆ.
ಚೇತನ್ ಚೌಹಾಣ್ ಅವರು ಮಾಜಿ ಸಂಸದರೂ ಆಗಿದ್ದರು. ಇದೀಗ ಉತ್ತರ ಪ್ರದೇಶದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ಚೇತನ್ ಚೌಹಾಣ್ ಕೊರೋನಾ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಆಪ್ತರು ಕೂಡ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ,
ಚೇತನ್ ಚೌಹಾಣ್ ಅವರು ಭಾರತ ಕ್ರಿಕೆಟ್ ತಂಡದ ಪರ 1969ರಿಂದ 1978ರವರೆಗೆ ಆಡಿದ್ದರು. ಗವಾಸ್ಕರ್ ಜೊತೆ ಇನಿಂಗ್ಸ್ ಆರಂಭಿಸುತ್ತಿದ್ದ ಚೌಹಾಣ್ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 31.57ರ ಸರಾಸರಿಯಂತೆ 2084 ರನ್ ದಾಖಲಿಸಿದ್ದಾರೆ. 97 ರನ್ ಅವರ ಗರಿಷ್ಠ ರನ್ ಆಗಿದೆ. ಹಾಗೇ ಅವರು ಏಳು ಏಕದಿನ ಪಂದ್ಯಗಳನ್ನು ಆಡಿದ್ದು, 167 ರನ್ ಗಳಿಸಿದ್ದಾರೆ.
ಇನ್ನೊಂದೆಡೆ ಗವಾಸ್ಕರ್ ಜೊತೆ ಆರಂಭಿಕ ಆಟಗಾರನಾಗಿದ್ದ ಚೌಹಾಣ್ ಅವರು 10 ಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದು, ಮೂರು ಸಾವಿರ ರನ್ ಕೂಡ ಪೇರಿಸಿದ್ದಾರೆ. ದೇಸಿ ಕ್ರಿಕೆಟ್ ನಲ್ಲಿ ಚೇತನ್ ಚೌಹಾಣ್ ಅವರು ದೆಹಲಿ ಮತ್ತು ಮಹಾರಾಷ್ಟ್ರ ತಂಡಗಳನ್ನು ಪ್ರತಿನಿಧಿಸುತ್ತಿದ್ದರು. ಕ್ರಿಕೆಟ್‍ಗೆ ಬದುಕಿನ ನಂತರ ರಾಜಕೀಯಕ್ಕೆ ಎಂಟ್ರಿಕೊಟ್ಟ ಚೌಹಾಣ್ ಅವರು ಸಮಾಜ ಸೇವೆಯಲ್ಲೂ ತನ್ನನ್ನು ತೋಡಗಿಸಿಕೊಂಡಿದ್ದಾರೆ.








