ಶಿವಮೊಗ್ಗ : ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಕೊರೊನಾ ವೈರಸ್ ನಿಂದಾಗಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ತೀವ್ರ ಜ್ವರ ಹಾಗೂ ಉಸಿರಾಟದ ತೊಂದತೆ ಕಾಣಿಸಿಕೊಂಡ ಹಿನ್ನೆಲೆ ಅಪ್ಪಾಜಿಗೌಡ ಅವರು ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್ -19 ಸೋಂಕಿರುವುದು ದೃಢಪಟ್ಟಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.
ನೆಚ್ಚಿನ ನಾಯಕನ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೊರೊನಾವನ್ನು ಲೆಕ್ಕಿಸದೇ ಆಸ್ಪತ್ರೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅವರ ಅನುಯಾಯಿಗಳು ಜಮಾಯಿಸಿದ್ದರು. ನಂತರ ಮಧ್ಯರಾತ್ರಿ 2 ಗಂಟೆಗೆ ಪಾರ್ಥಿವ ಶರೀರವನ್ನು ಭದ್ರಾವತಿಯ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮಾಜಿ ಶಾಸಕರ ಪಾರ್ಥಿವ ಶರೀರ ತಮ್ಮ ನಿವಾಸಕ್ಕೆ ತೆರಳುತ್ತಿದ್ದಂತೆ ನಿವಾಸದ ಬಳಿಯಲ್ಲಿಯೂ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಅಂದಹಾಗೆ ಭದ್ರಾವತಿ ಅಂದರೆ ನೆನಪಿಗೆ ಬರೋದು ಇಬ್ಬರೇ ರಾಜಕಾರಣಿಗಳು ಒಬ್ಬರು ಹಾಲಿ ಶಾಸಕ ಕಾಂಗ್ರೆಸ್ ನ ಬಿ ಕೆ ಸಂಗಮೇಶ್ ಇನ್ನೊಬ್ಬರು ಜೆಡಿಎಸ್ ನ ಅಪ್ಪಾಜಿ ಗೌಡರು. ಇವರು ವಿಐಎಸ್ ಎಲ್ ನೌಕರರಾಗಿ ಜೀವನ ಆರಂಭಿಸಿ ಕಾರ್ಮಿಕ ನಾಯಕರಾಗಿ ಬೆಳೆದು ನಂತರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. 1994 ಹಾಗೂ 1999 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸತತ ಸೋಲು ಅನುಭವಿಸಿದ ಅಪ್ಪಾಜಿ ಗೌಡರು 2013ರಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ಹೀಗೆ ಮೃತ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರು ಭದ್ರಾವತಿ ಕ್ಷೇತ್ರದಿಂದ ಒಟ್ಟು 3 ಬಾರಿ ಶಾಸಕರಾಗಿದ್ದರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.








