ಜೈ ಶ್ರೀ ರಾಮ್ ಎಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ
ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಶ್ಲಾಘನೆ ಮಾಡಿದ್ದಾರೆ.
ದನೀಶ್ ಕನೇರಿಯಾ ಪಾಕ್ ವಿರುದ್ಧ ಆಡಿದ ಎರಡನೇ ಹಿಂದೂ ಆಟಗಾರ. ಪಾಕ್ ಪರ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2000ರಿಂದ 2010ರವರೆಗೆ ಪಾಕ್ ಪರ ಕನೇರಿಯಾ ಆಡಿದ್ದರು.
ವಿಶ್ವದಾದ್ಯಂತ ಇರೋ ಹಿಂದೂಗಳಿಗೆ ಇದೊಂದು ಐತಿಹಾಸಿಕ ದಿನವಾಗಿದೆ. ಶ್ರೀ ರಾಮ ನಮಗೆಲ್ಲರಿಗೂ ಆದರ್ಶಪ್ರಾಯ ಎಂದು ಹೇಳಿದ್ದಾರೆ.
ಶ್ರೀರಾಮನ ಸೌಂದರ್ಯ ಆತನ ಹೆಸರಿನಲ್ಲಿಲ್ಲ. ಬದಲಾಗಿ ಆತನ ವ್ಯಕ್ತಿತ್ವಲ್ಲಿದೆ. ದುಷ್ಟರನ್ನು ಸಂಹರಿಸಿ ವಿಜಯದ ಸಂಕೇತ ಶ್ರೀರಾಮ. ವಿಶ್ವದೆಲ್ಲೆಡೆ ಎಲ್ಲರೂ ಸಂತಸದಿಂದಿದ್ದಾರೆ. ಇದು ತೃಪ್ತಿಯ ಕ್ಷಣವಾಗಿದೆ. ನಾವು ಸುರಕ್ಷಿತರು, ನಮ್ಮ ಧಾರ್ಮಿಕ ನಂಬಿಕೆಗಳಿಂದ ಯಾರಿಗೂ ತೊಂದರೆಯಾಗಬಾರದು. ಭಗವಾನ್ ಶ್ರೀರಾಮ್ ಸಹೋದರತೆ ಮತ್ತು ಏಕತೆಯ ಪ್ರತೀಕ ಎಂದು ಕನೇರಿಯಾ ಹೇಳಿದ್ದಾರೆ.









