ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಹೆಚ್.ಡಿ. ದೇವೇಗೌಡರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಎರಡು ವರ್ಷಗಳ ನಂತರ ವಿಧಾನಸೌದಕ್ಕೆ ಬಂದ ಹೆಚ್,ಡಿ.ದೇವೇಗೌಡರು ಕರ್ನಾಟಕ ವಿಧಾನಸಭಾ ಕಾರ್ಯದರ್ಶಿಗಳೂ ಆದ ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಅವರಿಗೆ ಇಂದು ನಾಮಪತ್ರ ಸಲ್ಲಿಸಿದರು. ಆ ಮೂಲಕ ಎರಡನೇ ಬಾರಿ ರಾಜ್ಯಸಭೆ ಪ್ರವೇಶ ಮಾಡಲು ದೇವೇಗೌಡರು ಸಿದ್ದರಾಗಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಹೆಚ್.ಡಿ.ದೇವೇಗೌಡರ ಜೊತೆ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಶರವಣ ಇದ್ದರು. ಕಾಂಗ್ರೆಸ್ ಶಾಸಕರು ಯಾರು ಸಹ ಇರಲ್ಲಿಲ. ಆದರೆ ಕಾಂಗ್ರೆಸ್ ಶಾಸಕರು ನಾಮಪತ್ರದ ಸೂಚನೆಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಬಿಜೆಪಿಯವರು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹಾಗಾಗಿ ಚುನಾವಣೆ ನಡೆಯುವುದು ಸಹ ಬಹುತೇಕ ಡೌಟ್ ಇದೆ. ಯಾಕೆಂದರೆ ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲುತ್ತದೆ, ಕಾಂಗ್ರೆಸ್ ಒಂದು ಸ್ಥಾನ , ಇನ್ನೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡರು ಸಹ ಸುಲಭವಾಗಿ ಗೆಲವು ಪಡೆಯುತ್ತಾರೆ. ಹಾಗಾಗಿ ಇದೊಂದು ಅವಿರೋಧ ಆಯ್ಕೆ ಆಗುತ್ತದೆ ಎಂಬುದು ಬಹುತೇಕ ಖಚಿತವಾಗಿದೆ.