ಚೆನ್ನೈ : ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ನಳಿನಿ ಶ್ರೀಹರನ್ ಸೋಮವಾರ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಬಗ್ಗೆ ಆಕೆಯ ವಕೀಲ ಪುಗಲೆಂತಿ ಮಾಹಿತಿ ಮಾಡಿದ್ದು, ನಳಿನಿ ಶ್ರಿಹರನ್ ಸುಮಾರು 29 ವರ್ಷಗಳಿಂದ ವೆಲ್ಲೂರು ಕಾರಾಗೃಹದಲ್ಲಿದ್ದಾಳೆ. ಆದ್ರೆ ಇದೇ ಮೊದಲ ಬಾರಿಗೆ ಈ ರೀತಿ ಮಾಡಿದ್ದಾಳೆ.
ನಳಿನಿ ತನ್ನದೇ ಕೋಣೆಯಲ್ಲಿದ್ದ ಇನ್ನೊಬ್ಬ ಕೈದಿಯೊಂದಿಗೆ ಜಗಳವಾಡಿದ್ದರು. ಈ ವಿಚಾರವನ್ನು ಇತರ ಕೈದಿಗಳು ಜೈಲರ್ ಗೆ ತಿಳಿಸಿದಾಗ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಆರೋಪ ಪ್ರಕರಣದಲ್ಲಿ ಆಕೆಯ ಪತಿಯೂ ಕೂಡಾ ಅಪರಾಧಿಯಾಗಿದ್ದು, ಒಟ್ಟು ಏಳು ಮಂದಿಗೆ ಶಿಕ್ಷೆಯಾಗಿದೆ. 1991ರ ಮೇ 21 ರಂದು ರಾಜೀವ್ ಗಾಂಧಿ ಹತ್ಯೆಯಾಗಿತ್ತು. ತಮಿಳುನಾಡಿನ ಶ್ರೀಪೆರಂಬೂರ್ನಲ್ಲಿ ಚುನಾವಣಾ ಸಮಾವೇಶದ ಸಮಯದಲ್ಲಿ ಎಲ್ ಟಿಟಿಇ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಗೆ ಮಾಜಿ ಪ್ರಧಾನಿ ಬಲಿಯಾಗಿದ್ದರು.