ಕರ್ನಾಟಕದ ಮಾಜಿ ಫುಟ್‍ಬಾಲ್ ಆಟಗಾರ ಟಿ. ಪುಟ್ಟಸ್ವಾಮಿ ನಿಧನ
ಕರ್ನಾಟಕದ ಮಾಜಿ ಫುಟ್‍ಬಾಲ್ ಆಟಗಾರ ಟಿ.ಪುಟ್ಟಸ್ವಾಮಿ ಅವರು ನಿಧನರಾಗಿದ್ದಾರೆ. ಕರ್ನಾಟಕ ಫುಟ್‍ಬಾಲ್ ಆಟದಲ್ಲಿ ಛಾಪು ಮೂಡಿಸಿದ್ದ ಹಿರಿಯ ಆಟಗಾರ ಪುಟ್ಟಸ್ವಾಮಿ ತನ್ನ 79ನೇ ವಯಸ್ಸಿನಲ್ಲಿ ಈ ಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಅವರು ಪತ್ನಿ ಹಾಗೂ ಐವರು ಮಕ್ಕಳು ಸೇರಿದಂತೆ ಅಪಾರ ಸ್ನೇಹಿತರು ಮತ್ತು ಬಂಧುಗಳನ್ನು ಅಗಲಿದ್ದಾರೆ.
ಕರ್ನಾಟಕ ಮತ್ತು ಬೆಂಗಳೂರು ಜಿಲ್ಲಾ ಫುಟ್‍ಬಾಲ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿಯೂ ಟಿ. ಪುಟ್ಟಸ್ವಾಮಿ ಅವರು ಸೇವೆ ಸಲ್ಲಿಸಿದ್ದರು. ಒಬ್ಬ ಅದ್ಭುತ ಆಟಗಾರನಾಗಿದ್ದ ಪುಟ್ಟಸ್ವಾಮಿ ತನ್ನ ಆಪ್ತವಲಯದಲ್ಲಿ ಪುಟ್ಟ ಅಂತನೇ ಫೇಮಸ್ ಆಗಿದ್ದರು. ಪ್ರತಿಷ್ಠಿತ ಸಂತೋಷ್ ಕಪ್ ಫುಟ್‍ಬಾಲ್ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಐದಾರು ಬಾರಿ ಪ್ರತಿನಿಧಿಸಿದ್ದರು. ಅಲ್ಲದೆ ಉಪನಾಯಕನೂ ಆಗಿದ್ದರು. ಹಾಗೇ 1967ರಲ್ಲಿ ಕರ್ನಾಟಕ ತಂಡ ಸಂತೋಷ್ ಟ್ರೋಫಿ ಗೆಲುವಿನಲ್ಲಿ ಪುಟ್ಟಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಎಚ್‍ಎಎಲ್ ತಂಡವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಸ್ವಾಮಿ 1970ರಲ್ಲಿ ಜಾರ್ಜ್ ಹೂವರ್ ಕಪ್ ಗೆಲುವಿನ ರೂವಾರಿಯಾಗಿದ್ದರು. ನವ ರತ್ನ ಫುಟ್‍ಬಾಲ್ ಕ್ಲಬ್ ಮೂಲಕ ತನ್ನ ಫುಟ್‍ಬಾಲ್ ವೃತ್ತಿ ಬದುಕನ್ನು ಆರಂಭಿಸಿದ್ದ ಪುಟ್ಟಸ್ವಾಮಿ ಅವರು ಹಿಂದೂ ಸೋಷಿಯಲ್ ಫುಟ್‍ಬಾಲ್ ಕ್ಲಬ್ ಅನ್ನು ಸ್ಥಾಪಿಸಿದ್ದರು. ಎಚ್‍ಎಎಲ್ ತಂಡದ ಪರ ಪುಟ್ಟಸ್ವಾಮಿ ಅವರು 20 ವರ್ಷಗಳ ಕಾಲ