ಕೋಲಾರ: ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿರುವುದು ಸಂಪೂರ್ಣ ಸುಳ್ಳು, ವದಂತಿ ಎಂದು ಮಾಜಿ ಸ್ಪೀಕರ್, ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆಗಿರುವ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಮಾತನಾಡಿದ ರಮೇಶ್ ಕುಮಾರ್, ನಾನು ಜನರಿಗಾಗಿ ಕೆಲಸ ಮಾಡುವುದು ಇನ್ನೂ ಸಾಕಷ್ಟಿದೆ. ಇಂದಿರಾಗಾಂಧಿ ಭಾಷಣವನ್ನ ಕನ್ನಡಕ್ಕೆ ಭಾಷಾಂತರ ಮಾಡಿದವನು ನಾನು. ನನ್ನ ಜೀವನದಲ್ಲಿ ಯಾರೂ ಆಟವಾಡಲು ಬರಬಾರದು ಎಂದು ಕೆಂಡಾಮಂಡಲರಾಗಿದ್ದಾರೆ.
ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಸುಮಾರು ಜನ ಗಣ್ಯರು phone ಮಾಡ್ತಿದ್ದಾರೆ. ಬೆಂಗಳೂರು, ಬೆಳಗಾಂ, ವಿಜಯಪುರದಿಂದ ಹಲವರು phone ಮಾಡಿ ವಿಚಾರಿಸಿದ್ದಾರೆ. ನನ್ನ ರಾಜಕೀಯ ನಿವೃತ್ತಿ ನನ್ನೊಬ್ಬನ ನಿರ್ಧಾರ ಆಗಿರೊಲ್ಲ. ನಿವೃತ್ತಿಯಾಗುವಷ್ಟು ಸಮಯ ನನಗಿಲ್ಲ, ನಾನು ಸಾಕಷ್ಟು ಬಂಧನದಲ್ಲಿ ಸಿಲುಕಿದ್ದೇನೆ. ನನ್ನ ಕರ್ತವ್ಯ ನಿರ್ವಹಿಸಿ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಯಾರಿಗೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ತೀನಿ ಎಂದು ಹೇಳಿಲ್ಲ. ದಯಮಾಡಿ ಸುಳ್ಳುಸುದ್ದಿ ಹಬ್ಬಿಸಿ ನನ್ನ ಮಾನಹರಣ ಮಾಡಬೇಡಿ. ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ನನ್ನೊಬ್ಬನ ನಿರ್ಧಾರ ಅಲ್ಲ. ನಾನು ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸರ್ವಾಧಿಕಾರಿಯೇ ? ನನ್ನ ಪಕ್ಷಕ್ಕೆ ತಿಳಿಸಬೇಕು, ನನ್ನನ್ನು ಆಯ್ಕೆ ಮಾಡಿ ಕಳಿಸಿದ ಜನರಿಗೆ ತಿಳಿಸಬೇಕು. ನಾನೇನು ಸಭೆ ಕರೆದು ಹೇಳಿದ್ದೇನಾ ? ಪತ್ರಿಕಾಗೋಷ್ಠಿ ಕರೆದಿದ್ದೇನಾ ? ಇಲ್ಲ ಹೇಳಿಕೆ ಕೊಟ್ಟಿದ್ದೇನಾ ? ಎಂದು ವದಂತಿಯನ್ನೇ ಸುದ್ದಿ ಮಾಡಿದ ಮಾಧ್ಯಮವೊಂದರ ಪ್ರತಿನಿಧಿಯನ್ನು ರಮೇಶ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel