ಪೊಲೀಸರನ್ನೇ ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು : VIDEO
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಉಗ್ರ ಸ್ವರೂಪ ಪಡೆದುಕೊಂಡಿದೆ. ದೆಹಲಿಯಲ್ಲಿ ರೈತರು ನಡೆಸುತ್ತಿರುವ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದಿದೆ. ಶಾಂತಿಯುತವಾಗಿ ರ್ಯಾಲಿ ಮಾಡ್ತೀವಿ ಅಂದಿದ್ದ ಪ್ರತಿಭಟನಾಕಾರರು ಇವತ್ತು ಖಡ್ಗ, ರಾಡ್, ದೊಣ್ಣೆಗಳನ್ನ ಹಿಡ್ಕೊಂಡು ರಸ್ತೆಗೆ ಇಳಿದಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಭಟನಾನಿರತ ರೈತರು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾರೆ. ಇದರಿಂದ ಪೊಲೀಸರು ದಿಕ್ಕಾಪಾಲಾಗಿ ಓಡಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ.
#WATCH Protesters break barricade, attack police personnel and vandalise police vehicle at ITO in central Delhi pic.twitter.com/1ARRUX6I8E
— ANI (@ANI) January 26, 2021
ಪ್ರತಿಭಟನಾಕಾರರು ತಮ್ಮ ಕೈಗೆ ಸಿಕ್ಕ ಸಕ್ಕ ಪೊಲೀಸರನ್ನ ಹಿಡಿದು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ದೇ ಪೊಲೀಸರ ಮೇಲೆಯೇ ಟ್ರಾಕ್ಟರ್ ಗಳನ್ನ ಹತ್ತಿಸಲು ಸಹ ಯತ್ನಿಸಿದ್ದಾರೆ. ಮತ್ತೊಂದೆಡೆ ರೈತರನ್ನ ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನ ಜೆಸಿಬಿ, ಕ್ರೇನ್ಗಳ ಮೂಲಕ ಕಿತ್ತೆಸೆದಿದ್ದಾರೆ. ಇದರ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿ ಈಗ ರಣರಂಗವಾಗಿ ಬದಲಾಗಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಮೆಟ್ರೋ ಸಂಚಾರವನ್ನ ಬಂದ್ ಮಾಡಲಾಗಿದೆ. ರೈತರು ಟ್ರಾಕ್ಟರ್ ಗಳ ಮೂಲಕ ಕೆಂಪು ಕೋಟೆ ಕೂಡ ತಲುಪಿದ್ದಾರೆ. ಇತ್ತ ರೈತರ ಟ್ರ್ಯಾಕ್ಟರ್ ರಾಲಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬಸ್ ಗಳ ಗಾಜನ್ನು ಪುಡಿಗೈಯಲಾಗಿದೆ. ಇನ್ನೂ ಗಣರಾಜ್ಯೋತ್ಸವ ಪರೇಡ್ ಆರಂಭವಾಗುವ ಮುನ್ನವೇ ರೈತರು ಔಟರ್ ರಿಂಗ್ ರೋಡ್ ಮೂಲಕ ಪ್ರವೇಶಿಸಲು ಯತ್ನಿಸಿದ್ದೇ ಘರ್ಷಣೆಗೆ ಕಾರಣವಾಗಿರುವುದಾಗಿ ವರದಿಯಾಗಿದೆ.
#WATCH Violence continues at ITO in central Delhi, tractors being driven by protestors deliberately try to run over police personnel pic.twitter.com/xKIrqANFP4
— ANI (@ANI) January 26, 2021
ನಮ್ಮ ಪ್ರತಿಭಟನೆ ವೇಳೆ ನಡೆದ ಗಲಭೆಗೂ ನಮಗೂ ಸಂಬಂಧವಿಲ್ಲ: ಭಾರತೀಯ ಕಿಸಾನ್ ಸಂಘ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel