ದೇಶಕ್ಕೆ ಕೊರೊನಾ ವೈರಸ್ ಕಾಲಿಟ್ಟಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಈ ವೈರಸ್ ಬಗ್ಗೆ ಬಗೆಗಿನ ಮಾಹಿತಿಗಳು ವಿಪರೀತವಾಗಿ ಹರಿದಾಡುತ್ತಿವೆ. ಇದರಲ್ಲಿ ಹಲವು ಫೇಕ್ ನ್ಯೂಸ್ ಕೂಡ ಹರಿದಾಡುತ್ತಾ ಜನರಲ್ಲಿ ಗಾಬರಿ ಹುಟ್ಟಿಸುತ್ತಿವೆ. ಹೀಗೆ ಫಾರ್ವರ್ಡ್ ಆಗಿ ಬರೋ ಸಂದೇಶಗಳಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ತಿಳಿದುಕೊಳ್ಳುವುದೇ ಜನರು ಆ ಸಂದೇಶವನ್ನು ಫಾರ್ವರ್ಡ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ದೂರು ಕೇಳಿಬಂದ ಹಿನ್ನೆಲೆ ವಾಟ್ಸಾಪ್ ಇದೀಗ ಹೊಸ ಟ್ರಿಕ್ ಜಾರಿಗೆ ತಂದಿದೆ.
ಒಬ್ಬರಿಗೆ ಮಾತ್ರ ಮೆಸೇಜ್ ಫಾರ್ವಡ್ ಆಗುತ್ತೆ!
ಹೌದು..! ಈ ಹಿಂದೆ ನಾವು ವಾಟ್ಸಾಪ್ ನಲ್ಲಿ ಬಂದ ಮೆಸೇಜ್ ಗಳನ್ನು ಎಷ್ಟು ಜನರಿಗಾದರೂ ಫಾರ್ವಡ್ ಮಾಡಬುವುದಾಗಿತ್ತು. ಆದ್ರೆ ಈ ಬಾರಿ ಈಗಾಗಲೇ ಐದಕ್ಕಿಂತ ಹೆಚ್ಚು ಸಲ ಫಾರ್ವಡ್ ಆದ ಮೆಸೇಜ್ ಗಳನ್ನು, ನೀವು ಕೇವಲ ಒಬ್ಬರಿಗಷ್ಟೆ ಫಾರ್ವಡ್ ಮಾಡಬಹುದಾಗಿದೆ. ಇದರಿಂದಾಗಿ ಸುಳ್ಳು ಸುದ್ದಿಗಳು ಹರಡುವುದನ್ನು ನಿಲ್ಲಿಸಬಹುದು ಎಂದು ವಾಟ್ಸಾಪ್ ಹೇಳಿಕೊಂಡಿದೆ.








