ಮುಂಬೈ: ಸಹರಾ ಗ್ರೂಪ್ ಸಂಸ್ಥಾಪಕ ಇಹ ಲೋಕ ತ್ಯಜಿಸಿದ್ದಾರೆ.
ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಸ್ಥಾಪಕ ಹಾಗೂ ಅಧ್ಯಕ್ಷ ಸುಬ್ರತಾ ರಾಯ್ (Subrata Roy) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸುಬ್ರತಾ ರಾಯ್ ಅವರು ಹಲವಾರು ದಿನಗಳಿಂದ ಅಧಿಕ ರಕ್ತದೊತ್ತಡ ಹಾಗೂ ಮಧು ಮೇಹದಿಂದ ಬಳಲುತ್ತಿದ್ದರು. ಅವರ ಆರೋಗ್ಯ ತೀರಾ ಹಗದೆಟ್ಟ ಪರಿಣಾಮ ಮುಂಬಯಿನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಗ್ರೂಪ್ ತಿಳಿಸಿದೆ.
ಸುಬ್ರತಾ ರಾಯ್ ಕೇವಲ 2 ಸಾವಿರ ರೂ. ಬಂಡವಾಳದಿಂದ ತಮ್ಮ ಉದ್ಯಮ ಆರಂಭಿಸಿದ್ದರು. ಫೈನಾನ್ಸ್ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತಿದ್ದಂತೆ ದೇಶದಾದ್ಯಂತ 1,700ಕ್ಕೂ ಅಧಿಕ ಕಚೇರಿಗಳನ್ನು ತೆರೆದಿದ್ದರು. ಮೂಲಸೌಕರ್ಯ, ಹಣಕಾಸು, ರಿಯಲ್ ಎಸ್ಟೇಟ್, ರಿಟೇಲ್, ಮಾಧ್ಯಮ, ಮನರಂಜನೆ ಸೇರಿದಂತೆ ಹಲವಾರು ವಲಯಗಳಲ್ಲಿ ತಮ್ಮ ಉದ್ಯಮ ಆರಂಭಿಸಿದ್ದರು.
ಸುಬ್ರತಾ ರಾಯ್ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.