ಎ ಸಿ ಸ್ಪೋಟಗೊಂಡು ಕುಟುಂಬದ ನಾಲ್ವರ ದಾರುಣ ಸಾವು
ವಿಜಯನಗರ: ಎಸಿ ಸ್ಫೋಟಗೊಂಡು ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಿಯಮ್ಮನಹಳ್ಳಿಯ ನಡೆದಿದೆ.
ಶಾರ್ಟ್‌ಸರ್ಕ್ಯೂಟ್‌ನಿಂದ ಎಸಿ ಸ್ಫೋಟಗೊಂಡು ರಾಘವೇಂದ್ರಶೆಟ್ಟಿ ಎಂಬುವವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ ಪತಿ, ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ವೆಂಕಟ್ ಪ್ರಶಾಂತ್(42), ಪತ್ನಿ ಡಿ.ಚಂದ್ರಕಲಾ(38), ಮಕ್ಕಳಾದ H.A.ಅರ್ದ್ವಿಕ್(16), ಪ್ರೇರಣಾ(8) ಮೃತ ಪಟ್ಟ ದುರ್ದೈವಿಗಳು.
ಶಾರ್ಟ್‌ಸರ್ಕ್ಯೂಟ್‌ನಿಂದ ಎಸಿ ಸ್ಫೋಟಗೊಂಡಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಎಸಿ ಸ್ಫೋಟಗೊಂಡು ಇಡೀ ಮನೆ ಧಗಧಗನೆ ಹೊತ್ತಿ ಉರಿದಿದೆ. ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ತಹಸೀಲ್ದಾರ್ ವಿಶ್ವಜಿಜ್ ಮೆಹ್ತಾ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಪದ್ಮಶ್ರೀ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಅವರೂ ಘಟನೆ ನಡೆದ ಸ್ಥಳದಲ್ಲಿದ್ದು ಕುಟುಂಬಸ್ಥರಿಗೆ ಸಾಂತ್ವಾನ ನಿಡಿದ್ದಾರೆ.
Four Died from a family over ac blast in vijayanagar








