ಕಲಬುರಗಿ : ಕೀಟನಾಶಕವನ್ನು ಹತ್ತಿ ಬೆಳೆಗೆ ಸಿಂಪಡಿಸಿದ ನಂತರ ನಾಲ್ವರು ರೈತರು (Farmers) ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುನಿಲ್ (34), ಅನಿಲ್ (22), ಕುಮಾರ್ (30) ಹಾಗೂ ಖೇಮು ರಾಠೋಡ್ ಅಸ್ವಸ್ಥಗೊಂಡ ರೈತರು ಎನ್ನಲಾಗಿದೆ.
ಅಸ್ವಸ್ಥರಾಗಿರುವ ರೈತರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರು ರೈತರು ಹತ್ತಿ ಬೆಳೆಗೆ ರೋಗ ನಿಯಂತ್ರಣಕ್ಕಾಗಿ ಕೀಟ ನಾಶಕ ಸಿಂಪಡಿಸಿದ್ದರು. ಆನಂತರ ಮನೆಗೆ ಬಂದ ಕೂಡಲೇ ತಲೆಸುತ್ತು ಹಾಗೂ ವಾಂತಿ-ಭೇದಿ ಆರಂಭವಾಗಿದೆ.
ಕುಟುಂಬಸ್ಥರು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ರೈತರ ಆರೋಗ್ಯದಲ್ಲಿ ನಿರಂತರ ಏರುಪೇರು ಉಂಟಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗುತ್ತಿದೆ.