ಉಕ್ರೇನ್ – ರಷ್ಯಾ ಬಿಕ್ಕಟ್ಟು – ಯುದ್ಧದ 4ನೇ ದಿನ ಪ್ರಮುಖಾಂಶಗಳು ಇಲ್ಲಿವೆ..ಓದಿ.
1 ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ರಷ್ಯಾದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಿಶ್ವದಾದ್ಯಂತ ಜನರನ್ನು ಒತ್ತಾಯಿಸಿದ್ದಾರೆ.
2 ರಷ್ಯಾ, ಉಕ್ರೇನ್‌ನಲ್ಲಿ ನೋವಾ ಕಾಖೋವ್ಕಾ ಪ್ರದೇಶವನ್ನ ಆಕ್ರಮಿಸಿಕೊಂಡಿದೆ. ಇದು ದಕ್ಷಿಣ ಉಕ್ರೇನ್ ನಗರಗಳಾದ ಖೆರ್ಸನ್ ಮತ್ತು ಬರ್ಡಿಯಾನ್ಸ್ಕ್ ಪ್ರದೇಶವನ್ನ ಸುತ್ತುವರೆದಿದೆ.
3 ಚೆರ್ನೋಬಿಲ್ ಅಣುಸ್ಥಾವರದ ಮೇಲೆ ರಷ್ಯಾ ಆಕ್ರಮಣದ ನಂತರ, ಪರಮಾಣು ವಿಕಿರಣದ ಬೆದರಿಕೆ 20 ಪಟ್ಟು ಹೆಚ್ಚಾಗಿದೆ. ಈ ಪ್ರದೇಶದಲ್ಲಿ ರಷ್ಯಾದ ಪಡೆಗಳ ಚಲನೆಯಿಂದಾಗಿ ವಿಕಿರಣಶೀಲ ಧೂಳು ಸುತ್ತಲೂ ಹರಡಿದೆ.
4 ಉಕ್ರೇನ್ ಯುದ್ಧಕ್ಕೆ ಅಮೆರಿಕವೇ ಕಾರಣ ಎಂದು ಉತ್ತರ ಕೊರಿಯಾ ಆರೋಪಿಸಿದೆ, ಅಮೆರಿಕ ಸೂಪರ್ ಪವರ್ ಆಗಿದ್ದ ದಿನಗಳು ಕಳೆದು ಹೋಗಿವೆ ಎಂದು ಹೇಳಿದೆ.
5 ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾ ರಷ್ಯಾದ ಎಲ್ಲಾ ಮೀಡಿಯಾಗಳನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ಮಾಡುವುದಕ್ಕೆ ನಿಷೇಧಿಸಿದೆ.
6 ಯೂಟ್ಯೂಬ್ ರಷ್ಯಾದ ರಾಜ್ಯ ಔಟ್‌ಲೆಟ್, ಆರ್‌ಟಿ ಸೇರಿದಂತೆ ಹಲವಾರು ಮೀಡಿಯಾ ಚಾನಲ್‌ಗಳನ್ನು ನಿಷೇಧಿಸಿದೆ.
7 ರಷ್ಯಾದಲ್ಲಿ, ಉಕ್ರೇನ್ ಮೇಲಿನ ದಾಳಿಯ ವಿರುದ್ಧ ಪ್ರತಿಭಟಿಸಿದ 3,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
8 ಉಕ್ರೇನ್ ಯುದ್ಧದಲ್ಲಿ ಪ್ರಸ್ತುತ ಸ್ಥಿತಿ
ರಷ್ಯಾದ ದಾಳಿಯಲ್ಲಿ ಇದುವರೆಗೆ 33 ಮಕ್ಕಳು ಸೇರಿದಂತೆ 198 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಇದಲ್ಲದೆ, 1,115 ಜನರು ಗಾಯಗೊಂಡಿದ್ದಾರೆ. ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ ನಿರಾಶ್ರಿತರು ಪೋಲೆಂಡ್, ಮೊಲ್ಡೊವಾ ಮತ್ತು ರೊಮೇನಿಯಾವನ್ನು ತಲುಪಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








