ರಕ್ಷಾ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ 1,00,000 ಪುಸ್ತಕಗಳ ಉಚಿತ ವಿತರಣೆ
ಬೆಂಗಳೂರು : ಆರ್ಥಿಕವಾಗಿ ಹಿಂದುಳಿದ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು, ಮಕ್ಕಳನ್ನ ವಿದ್ಯಾವಂತರಾಗಿ ಮಾಡಿದರೆ ದೇಶ ಅಭಿವೃದ್ದಿ ಸಾಧ್ಯ ಎಂಬ ಅಚಲವಾದ ನಂಬಿಕೆಯಿಂದ ರಕ್ಷಾ ಫೌಂಡೇಷನ್ ಶ್ರಮಿಸುತ್ತಿದೆ ಎಂದು ಸಿ.ಕೆ.ರಾಮಮೂರ್ತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿ.ಕೆ.ರಾಮಮೂರ್ತಿರವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜಯನಗರ ವಿಧಾನಸಭಾ ಕ್ಷೇತ್ರದ, ಶಾಲಿನಿ ಆಟದ ಮೈದಾನದಲ್ಲಿ ದಿನಾಂಕ 28-6-2022ರ ಸೋಮವಾರ ಬೆಳಗ್ಗೆ 10ಕ್ಕೆ ರಕ್ಷಾ ಫೌಂಡೇಷನ್ 10ನೇ ವರ್ಷದ ಶುಭಾ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬಿ.ಬಿ.ಎಂ.ಪಿ.ಮತ್ತು ಸರ್ಕಾರಿ ಶಾಲೆ,ಅರೆ ಸರ್ಕಾರಿ 10ಸಾವಿರ ವಿದ್ಯಾರ್ಥಿಗಳಿಗೆ 1ಲಕ್ಷ ನೋಟ್ ಪುಸ್ತಕ ಮತ್ತು 1ಲಕ್ಷ ಪೆನ್ ವಿತರಣೆ ಹಾಗೂ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ಶೇಕಡ 95%ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 50ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ, ಎರಡು ಅನಾಥ ಮಕ್ಕಳಿಗೆ ದತ್ತು ತೆಗೆದುಕೊಂಡು ಸಂಪೂರ್ಣ ವಿದ್ಯಾಭ್ಯಾಸಕ್ಕೆ 1ಲಕ್ಷ ಸಹಾಯಧನ ಹಾಗೂ ಜಯದೇವ ಆಸ್ಪತ್ರೆಗೆ ಮಕ್ಕಳ ಹೃದಯ ಚಿಕಿತ್ಯೆಗೆ 2ಲಕ್ಷ ರೂಪಾಯಿ ದೇಣಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಕ್ಷಾ ಫೌಂಡೇಷನ್ ಕಾರ್ಯಕ್ರಮದಲ್ಲಿ ಕಂದಾಯ ಸಚಿವರಾದ ಶ್ರೀ ಅಶೋಕ್ ರವರು, ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯರವರು,ಜಯದೇವ ಆಸ್ಪತ್ರೆ ಮುಖ್ಯಸ್ಥರು,ಖ್ಯಾತ ಹೃದಯ ತಜ್ಞರಾದ ಶ್ರೀ ಮಂಜುನಾಥ್ ರವರು,ಕರ್ನಾಟಕ ರಾಜ್ಯ ಅರಣ್ಯ ಮಂಡಳಿ ಅಧ್ಯಕ್ಷರು,ತಾರಾ ಅನುರಾಧ, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು ಹಾಗೂ ಶಾಸಕರು,ಮಾಜಿ ಬಿ.ಬಿ.ಎಂ.ಪಿ.ಸದಸ್ಯರುಗಳು ಮತ್ತು ರಾಜಕೀಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಕ್ಕಳ ಆರೋಗ್ಯ ರಕ್ಷಣೆಗೆ ಮತ್ತು ಆನಾರೋಗ್ಯ ಪೀಡಿತ ಮಕ್ಕಳಿಗೆ ಆಸ್ಪತ್ರೆ ಸೇರಿಸಲು ಉಚಿತವಾಗಿ ವ್ಯಾನಿನ ವ್ಯವಸ್ಥೆ.ನೂರಾರು ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ಟ್ಯಾಬ್ ವಿತರಣೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸ ಶಾಲೆಯ ಫೀಸು ಭರಿಸಿರುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಕಲಿಯಲು 10ಕಂಪ್ಯೂಟರ್ ಆಳವಡಿಸಲಾಗಿದೆ. ರಕ್ಷಾ ಫೌಂಡೇಷನ್ ವತಿಯಿಂದ ಕೊವಿಡ್-19ಸಾಂಕ್ರಮಿಕ ರೋಗದ ಸಂದರ್ಭದಲ್ಲಿ 10ಆಹಾರ ಕಿಟ್ ವಿತರಿಸಲಾಯಿತು ಮತ್ತು ಕೊವಿಡ್-19ಲಸಿಕಾ ಅಭಿಯಾನ. ರಕ್ಷಾ ಫೌಂಡೇಷನ್ ಸಾಮಾಜಿಕ ಸೇವಾ ಸಂಘಟನೆಯಾಗಿದ್ದು . ನೂರಾರು ಸ್ವಯಂ ಸೇವಕರ ತಂಡ ನಮ್ಮ ಜೊತೆಯಲ್ಲಿ ಸೇವಾ ನಿರತರಾಗಿ ಕೆಲಸ ಮಾಡುತ್ತಿದ್ದಾರೆ.
ರಕ್ಷಾ ಫೌಂಡೇಷನ್ ವತಿಯಿಂದ ಪತ್ರಿಕಾಗೋಷ್ಟಿ. ಮಾಜಿ ಬಿ.ಬಿ.ಎಂ.ಪಿ.ಸದಸ್ಯರು,ರಕ್ಷಾ ಫೌಂಡೇಷನ್ ಗೌರವಾಧ್ಯಕ್ಷರಾದ ಸಿ.ಕೆ.ರಾಮೂಮೂರ್ತಿರವರು ,ಅಧ್ಯಕ್ಷರಾದ ಮನೋಹರ್ ಭಂಡಾರಿ , ರಕ್ಷಾ ಫೌಂಡೇಷನ್ ಪದಾಧಿಕಾರಿಗಳಾದ ಅರವಿಂದ್,ವೆಂಕಟರಮಣ, ನವೀನ್ ಗರ್ಗ್, ಜಗದೀಶ್, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.








