ಬೆಂಗಳೂರು: ನಗರದ ಟೌನ್ ಹಾಲ್ ಬಳಿ ಅಮೂಲ್ಯಳಂತೆ ಯುವತಿವೊಬ್ಬಳು ಪಾಕ್ ಪರ ಘೋಷಣೆ ಕೂಗಿದ್ದಾಳೆ ಎಂದು ಆರೋಪಿಸಲಾಗಿದೆ. ಆದ್ರೆ ಯುವತಿ ಪಾಕ್ ಪರ ಘೋಷಣೆ ಕೂಗಿಲ್ಲ, ಬದಲಿಗೆ ಫ್ರೀ ಕಾಶ್ಮೀರ ಬೋರ್ಡ್ ಪ್ರದರ್ಶಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದಹಾಗೆ ಬೋರ್ಡ್ ಪ್ರದರ್ಶಿಸಿದ ಯುವತಿಯ ಹೆಸರು ಅರುದ್ರಾ, ಈಕೆ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಎನ್ನಲಾಗಿದ್ದು. ಖಾಸಗಿ ಕಾಲೇಜ್ ನಲ್ಲಿ ಡಿಗ್ರಿ ಮುಗಿಸಿ ಗ್ರಾಫಿಕ್ ಡಿಸೈನರ್ ಆಗಿದ್ದಾಳೆ ಎನ್ನಲಾಗಿದೆ. ಸದ್ಯ ಯುವತಿಯನ್ನ ಬಂಧಿಸಿರುವ ಪೊಲೀಸರು ಎಸ್ ಜೆ ಪಾರ್ಕ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಆಕೆಯ ಕೈನಲ್ಲಿದ್ದ ಭಿತ್ತಿಪತ್ರವನ್ನ ಸೀಜ್ ಮಾಡಲಾಗಿದ್ದು, ಆ ಭಿತ್ತಿಪತ್ರದಲ್ಲಿ ಕಾಶ್ಮೀರ ಮುಕ್ತಿ, ದಲಿತ ಮುಕ್ತಿ, ಆದಿವಾಸಿ ಮುಕ್ತಿ, ಮುಸಲ್ಮಾನ್ ಮುಕ್ತಿ ಎಂದು ಬರೆಯಲಾಗಿದೆ.