ತೈಲ ಬೆಲೆ ಏರಿಕೆ ಎಫೆಕ್ಟ್ : ನವ ದಂಪತಿಗೆ ಪೆಟ್ರೋಲ್ ಗಿಫ್ಟ್
ಮೈಸೂರು : ಸತತ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದಾರೆ. ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರ 90 ರ ಗಡಿ ದಾಟಿದ್ದು, ಶೀಘ್ರವೇ 100ರೂ ಆಗುವ ಮೂಲಕ ಶತಕ ಬಾರಿಸಲಿದೆ. ಈ ಮಧ್ಯೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನ ಖಂಡಿಸಿ , ನವವಿಹಾತ ಜೋಡಿಗೆ ಸ್ನೇಹಿತರು ಪೆಟ್ರೋಲ್ ಗಿಫ್ಟ್ ಕೊಟ್ಟು ಗಮನ ಸೆಳೆದಿದ್ದಾರೆ. ಜೊತೆಗೆ ಕೇಂದ್ರದ ವಿರುದ್ಧ ವಿನೂತನವಾಗಿ ಆಕ್ರೋಶ ಹೊರಹಾಕಿದ್ದಾರೆ.
ಇಂಧನ ಬೆಲೆ ಏರಿಕೆ ಖಂಡಿಸಿ ಫೆ. 26ಕ್ಕೆ ಭಾರತ್ ಬಂದ್
ಹೌದು ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್ ಬಾಬು ಅವರ ಪುತ್ರಿ ನಿಕಿತಾ ಹಾಗೂ ನಿತೇಶ್ ಭಾಸ್ಕರರವರ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಗರಪಾಲಿಕೆ ಸದಸ್ಯೆ ಶೋಭಾ ಹಾಗೂ ಪತಿ ಸುನೀಲ್, ಸ್ನೇಹಿತರು ವಧು-ವರರಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ಗಮನ ಸೆಳೆದರು. ಈ ಮೂಲಕ ಪೆಟ್ರೋಲ್ ದರ ಏರುತ್ತಲೇ ಇರುವುದನ್ನ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.