ಇಂಧನ ಬೆಲೆ ಏರಿಕೆ ಖಂಡಿಸಿ ಫೆ. 26ಕ್ಕೆ ಭಾರತ್ ಬಂದ್
ಬೆಂಗಳೂರು : ಸತತ ತೈಲ ಬೆಲೆ ಏರಿಕೆ, ಕೇಂದ್ರ ಸರ್ಕಾರದ ಹೊಸ ಇ-ವೇ ಬಿಲ್ ನೀತಿ ವಿರೋಧಿಸಿ ಫೆಬ್ರವರಿ 26ಕ್ಕೆ ಭಾರತ್ ಬಂದ್ ನಡೆಸಲು ಸಿಎಐಟಿ ಕರೆ ನೀಡಿದೆ.
ಈ ಕುರಿಂತೆ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಮಾಹಿತಿ ನೀಡಿದೆ.
ತೈಲ ಬೆಲೆ ಏರಿಕೆ, ಜಿಎಸ್ ಟಿ ಹಾಗೂ ಇ ವೇ ಬಿಲ್ ನೀತಿ ವಿರೋಧಿಸಿ ಫೆಬ್ರವರಿ 26ರಂದು ಭಾರತ್ ಬಂದ್ ನಡೆಸಲಾಗುವುದು.
ಈ ಬಂದ್ ಗೆ ಆಲ್ ಇಂಡಿಯಾ ಟ್ರಾನ್ಪೋರ್ಟರ್ಸ್ ವೆಲ್ಫೇರ್ ಅಸೋಸಿಯೇಷನ್ ಬೆಂಬಲ ಸೂಚಿಸಿದೆ ಎಂದು ಸಿಎಐಟಿ ತಿಳಿಸಿದೆ.
ಇನ್ನು ಫೆಬ್ರವರಿ 26 ರಂದು ಬೆಳಿಗ್ಗೆ ಆರರಿಂದ ರಾತ್ರಿ ಎಂಟರ ವರೆಗೂ ಬಂದ್ ಇರಲಿದ್ದು, 8ವರೆಗೆ ಸುಮಾರು 40 ಲಕ್ಷ ಟ್ರಕ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಅಲ್ಲದೆ ಅಂದಿನ ಎಲ್ಲಾ ಬುಕ್ಕಿಂಗ್ ಗಳನ್ನು ತಿರಸ್ಕರಿಸಲಾಗುವುದು ಎಂದು ಸಿಎಐಟಿ ಮಾಹಿತಿ ನೀಡಿದೆ.
ಅಂದು 40 ಲಕ್ಷ ಟ್ರಕ್ ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವುದಿಂದ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.