ಬಯೋನ್ನೆ(ಫ್ರಾನ್ಸ್): ಬಸ್ ಡ್ರೈವರ್ ಮಾಸ್ಕ್ ಹಾಕದೇ ಚಾಲನೆ ಮಾಡಿದ್ದಕ್ಕೆ ಪ್ರಯಾಣಿಕರು ಬರ್ಬರವಾಗಿ ಹಲ್ಲೆ ಮಾಡಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ.
ಫ್ರಾನ್ಸ್ನ ಬಯೋನ್ನೆ ನಗರದಲ್ಲಿ ನಡೆದ ಘಟನೆಯಲ್ಲಿ ಬಸ್ ಚಾಲಕ ೫೯ ರ‍್ಷದ ಫಿಲಿಪ್ಪೆ ಮೋಂಗಿಲೊಟ್ ಮೃತಪಟ್ಟಿದ್ದಾನೆ. ಘಟನೆಯನ್ನು ಫ್ರಾನ್ಸ್ ಪ್ರಧಾನಿ ಜೇನ್ ಕ್ಯಾಸ್ಟೆಕ್ ತೀವ್ರವಾಗಿ ಖಂಡಿಸಿದ್ದು, ಮೃತನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೆ ಫ್ರಾನ್ಸ್ನ ರಾಜಕೀಯ ಪಕ್ಷಗಳ ನಾಯಕರೂ ಕೂಡ ಈ ರ‍್ಬರ ಕೃತ್ಯವನ್ನು ಖಂಡಿಸಿದ್ದಾರೆ. ಈ ಅಮಾನವೀಯ ಘಟನೆ ಫ್ರಾನ್ಸ್ ದೇಶಾದ್ಯಂತ ಪ್ರತಿಭಟನೆಯ ಕಿಚ್ಚನ್ನೇ ಹಚ್ಚಿಸಿದೆ.

ಘಟನೆ ನಡೆದಿದ್ದು ಹೇಗೆ..!
ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಧರಿಸುದವನ್ನು ಫ್ರಾನ್ಸ್ ರ‍್ಕಾರ ಕಡ್ಡಾಯ ಮಾಡಿದೆ. ಆದರೆ ಚಾಲಕ ಫಿಲಿಪ್ಪೆ ಮಾಸ್ಕ್ ಧರಿಸದೇ ಚಾಲನೆ ಮಾಡುತ್ತಿದ್ದ. ಬಸ್ ಬಯೋನ್ನೆ ನಿಲ್ದಾಣದ ಬಳಿ ನಿಲ್ಲುತ್ತಿದ್ದಂತೆ ಬಸ್ ಹತ್ತಲು ಬಂದ ಪ್ರಯಾಣಿಕರು ಮಾಸ್ಕ್ ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಎರಡೂ ಕಡೆ ಮಾತಿನ ಚಕಮಕಿ ನಡೆದಿದೆ. ರೊಚ್ಚಿಗೆದ್ದ ಪ್ರಯಾಣಿಕರು ಬಸ್ ಚಾಲಕನ ತಲೆ ಸೇರಿದಂತೆ ದೇಹದ ಮೇಲೆಲ್ಲಾ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಚಾಲಕ ಫಿಲಿಪ್ಪೆ ಕುಸಿದು ಬಿದ್ದಿದ್ದಾರೆ. ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಮೆದುಳು ನಿಷ್ಕ್ರಿಯವಾದ ಕಾರಣ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.
ಒಂದು ಸಣ್ಣ ನಿರ್ಲಕ್ಷ್ಯ ಹಾಗೂ ಪ್ರಯಾಣಿಕರ ತಾಳ್ಮೆ ರಹಿತ ರ‍್ತನೆ ಒಬ್ಬನ ಪ್ರಾಣಕ್ಕೆ ಕುತ್ತು ತಂದಿದೆ. ಘಟನೆ ಸಂಬಂಧ ಇಬ್ಬರು ಪ್ರಯಾಣಿಕರ ವಿರುದ್ಧ ಅಲ್ಲಿನ ಪೊಲೀಸರು ಕೊಲೆ ಯತ್ನ ಕೇಸ್ ದಾಖಲು ಮಾಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಫಿಲಿಪ್ಪೆ ಪುತ್ರಿ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ. ಫ್ರಾನ್ಸ್ನ ಬಸ್ ಚಾಲಕರು ಹಲ್ಲೆ ಖಂಡಿಸಿ ಬಸ್‌ಗಳನ್ನು ರಸ್ತೆಗಿಳಿಸಲ್ಲ ಎಂದು ಹಠ ಹಿಡಿದಿದ್ದರು. ಸರ್ಕಾರ ಚಾಲಕರಿಗೆ ಭದ್ರತೆ ನೀಡುವ ಭರವಸೆ ನೀಡಿದ ನಂತರ ಬಸ್ ಸೇವೆ ಪುನಾರಂಭಗೊಂಡಿದೆ.








