ಫ್ರೆಂಚ್ ಓಪನ್ 2021- ಫ್ರಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಸೆರೆನಾ, ಆಝಾರೆಂಕಾ..!
ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರು 2021ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರ ಬಿರುಗಾಳಿಯ ಆಟಕ್ಕೆ ಅಮೆರಿಕಾದ ಡೇನಿಲಾ ಕಾಲಿನ್ ಅವರು ತತ್ತರಿಸಿದ್ರು. ಪರಿಣಾಮ ಸೆರೆನಾ ವಿಲಿಯಮ್ಸ್ ಅವರು 6-4, 6-4 ನೇರ ಸೆಟ್ ಗಳನ್ನು ಕಾಲಿನ್ ಅವರನ್ನು ಮಣಿಸಿ ಫ್ರಿ ಕ್ವಾರ್ಟರ್‍ಗೆ ಲಗ್ಗೆ ಇಟ್ಟರು. ಅಲ್ಲದೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಅವರು 13ನೇ ಬಾರಿ ಫ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಕೂಡ ಮಾಡಿದ್ದಾರೆ.
24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಈ ಬಾರಿಯ ಫ್ರೆಂಚ್ ಓಪನ್ ಗೆಲ್ಲಲೇಬೇಕು ಅನ್ನೋ ಹಠಕ್ಕೆ ಕೂಡ ಸೆರೆನಾ ವಿಲಿಯಮ್ಸ್ ಬಿದ್ದಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತೆ ಆರ್ಯನಾ ಸಬಾಲೆಂಕಾ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಸಬಾರಿಂಕಾ ಅರು 4-6, 6-2, 0-6ರಿಂದ ರಷ್ಯಾದ ಅನಾಸ್ಟಾಸಿಯಾ ಪವ್ಲಾಯುಚೆಂಕೊವಾ ಅವರಿಗೆ ತಲೆಬಾಗಿದ್ರು.
ಹಾಗೇ ಮಾಜಿ ನಂಬರ್ ವನ್ ಆಟಗಾರ್ತಿ ವಿಕ್ಟೋರಿಯಾ ಆಝಾರೆಂಕಾ ಅವರು ಫ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆಝಾರೆಂಕಾ 6-2, 6-2ರಿಂದ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಮ್ಯಾಡಿಸನ್ ಕೈಸ್ ಅವರನ್ನು ಸೋಲಿಸಿದ್ರು. ಅಝಾರೆಂಕಾ ಅವರು ಮುಂದಿನ ಸುತ್ತಿನಲ್ಲಿ ರಷ್ಯಾದ ರಷ್ಯಾದ ಅನಾಸ್ಟಾಸಿಯಾ ಅವರನ್ನು ಎದುರಿಸಲಿದ್ದಾರೆ.