ಫ್ರೆಂಚ್ ಓಪನ್ 2021 – ಸ್ಪೇನ್ ಗೂಳಿ ರಫೆಲ್ ನಡಾಲ್ ಶುಭಾರಂಭ
ಆವೆ ಮಣ್ಣಿನ ಒಡೆಯ ರಫೆಲ್ ನಡಾಲ್ ಅವರು ಪ್ರತಿಷ್ಠಿತ 14ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ರಫೆಲ್ ನಡಾಲ್ ಅವರು 2021ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು 6-3, 6-2, 7-6ರಿಂದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪ್ರಿಯನ್ ಅವರನ್ನು ಸುಲಭವಾಗಿ ಪರಾಭವಗೊಳಿಸಿ ಎರಡನೇ ಸುತ್ತು ಪ್ರವೇಶಿಸಿದ್ರು..
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ಫ್ರಾನ್ಸ್ ನ ಗೇಲ್ ಮೊಂಫಿಲ್ಸ್ ಅವರು ಸ್ಪೇನ್ ನ ಅಲ್ಬರ್ಟ್ ರಾಮೋಸ್ ವಿನೊಲಾಸ್ ಅವರನ್ನು ಸೋಲಿಸಿದ್ರು. 1968ರಿಂದ ಫ್ರಾನ್ಸ್ ಟೆನಿಸ್ ಆಟಗಾರರು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಎರಡನೇ ಪ್ರವೇಶಿಸುತ್ತಿರುವುದು ಇದು ಮೂರನೇ ಬಾರಿ.. ಮೊಂಫಿಲ್ಸ್ ಅವರು ಎರಡನೇ ಸುತ್ತು ಪ್ರವೇಶಿಸಿದ ಮೂರನೇ ಆಟಗಾರನಾಗಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ನಲ್ಲಿ ಅಗ್ರ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ ಬಾರ್ಟಿ ಅವರು 6-4, 3-6, 6-2ರಿಂದ ಅಮೆರಿಕಾದ ಬೆರ್ನಾಡಾ ಪೆರಾ ಅವರನ್ನು ಮಣಿಸಿದ್ರು.
ಇನ್ನೊಂದೆಡೆ ಚೆಕ್ ಗಣರಾಜ್ಯದ ಪೆಟ್ರಾ ಕ್ವ್ವಿಟೊವಾ ಅವರು ಟೂರ್ನಿಯಿಂದ ಹೊರನಡೆದಿದ್ದಾರೆ. ಕ್ವೆಟೋವಾ ಅವರು ಮೊಣಕಾಲಿನ ನೋವಿನಿಂದಾಗಿ ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ಪೆಟ್ರಾ ಕ್ವಿಟೋವಾ ಅವರು 2012 ಮತ್ತು 2020ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ರು.