ಕಪ್ಪೆಗಳು ಒಟಗುಡುವುದಕ್ಕೆ ಒಂದು ಪ್ರಮುಖ ಕಾರಣವಿದೆ…!
ಕಪ್ಪೆಗಳು ಸದಾ ಒಟಗುಡುತ್ತಲೇ ಇರುತ್ತವೆ.. ಹೀಗೆಕಪ್ಪೆಗಳು ಒಂದೇ ಸಮ ಒಟಗುಡುವುದಕ್ಕೆ ಕಾರಣ ಮಾತ್ರ ಎಷ್ಟೋ ಜನರಿಗೆ ಗೊತ್ತಿರೋದಿಲ್ಲ.. ಕಪ್ಪೆಗಳು ಹೆಚ್ಚಾಗಿ ಮಳೆಗಾಲದಲ್ಲಿ ವಟಗುಡುತ್ತವೆ.. ಹೀಗೆ ಒಟಗುಡೋದಕ್ಕೆ ಕಾರಣ ಕಪ್ಪೆಗಳು ಮಿಲನಕ್ಕಾಗಿ ಸಂಗಾತಿಗಳನ್ನ ಹುಡುಕುತ್ತಾ ಅವುಗಳನ್ನ ತಮ್ಮತ್ತ ಕರೆಯುವುದಕ್ಕೆ..
ಹೌದು.. ಕಪ್ಪೆಗಳ ಚರ್ಮ ಸಾಮಾನ್ಯವಾಗಿ ತೀವ್ರ ಮೃದುವಾಗಿರೋದನ್ನ ನೋಡಬಹುದು.. ಇವು ಶೀತರಕ್ತಪ್ರಾಣಿಗಲಾಗಿರೋದ್ರಿಂದ ಅತಿ ಹೆಚ್ಚು ಚಳಿ , ಬಿಸಿಲು ತಡೆಕೊಳ್ಳುವ ಶಕ್ತಿ ಕಪ್ಪೆಗಳಿಗೆ ಇರೋದಿಲ್ಲ.. ಚಳಿಗಾಲದಲ್ಲಿ ಕಪ್ಪೆಗಳು ಬೆಚ್ಚಗಿನ ಜಾಗ ಹುಡುಕಿಂಡು (ಶಿಶಿರ ನಿದ್ರೆ ) ನಿದ್ರೆಗೆ ಜಾರುತ್ತವೆ.. ಆ ಸಮಯದಲ್ಲಿ ಕಪ್ಪೆಗಳು ಆಹಾರಕ್ಕಾಗಿ ಹುಡುಕಾಟ ನಡೆಸುವುದಿಲ್ಲ.. ಬದಲಾಗಿ ತನ್ನ ದೇಹಸದಲ್ಲಿನ ಕೊಬ್ಬಿನ ಅಂಶವನ್ನೇ ಜೀರ್ಣಿಸಿಕೊಳ್ಳುವ ಶಕ್ತಿ ಕಪ್ಪೆಗಳಿಗೆ ಇರುತ್ತೆ..
ಬೇಸಿಗೆ ವೇಲೆಯಲ್ಲೇ ಕಪ್ಪೆಗಳು ಬೆಚ್ಚನೆಯ ಜಾಗ ಹುಡುಕಿ ಗುಂಡಿಗಳ ಒಳಗಡೆ ಸೇರಿಕೊಳ್ತವೆ. ಬೇಸಿಗೆ ಮುಗಿದು ಮಳೆಗಾಲ ಬರುವ ಹೊತ್ತಿಗೆ ಮತ್ತೆ ಹೊರ ಬರಲಾರಂಭಿಸುತ್ತವೆ. ಆಗ ಒಟಗುಡೋದಕ್ಕೆ ಆರಂಭಿಸುತ್ತವೆ. ಸಂಗಾತಿಯನ್ನಕರೆಯಲು ಈ ರೀತಿ ವಟಗುಡುತ್ತವೆ.. ಹೀಗೆ ಶಬ್ಧ ಕೇಳಿಸಿಕೊಂಡು ಬರುವ ಕಪ್ಪೆಗಳ ಜೊತೆಗೆ ಸಂತಾನ ಮುಂದುವರೆಸುತ್ತವೆ..








