ಕಾಟಾಚಾರದ ನೈಟ್ ಕರ್ಫ್ಯೂ ಗೆ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು
ಬೆಂಗಳೂರು: ಇಂಗ್ಲೆಂಡ್‍ನಲ್ಲಿ ರೂಪಾಂತರಗೊಂಡಿರುವ ಹೊಸ ಕೊರೊನಾ ವೈರಸ್ ಸೇರಿದಂತೆ ಹೆಮ್ಮಾರಿ ಕೊರೊನಾಗೆ ಕಡಿವಾಣ ಹಾಕಲು ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ.
ಇಂದು ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಿಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇಂದಿನಿಂದ ಪ್ರತಿದಿನ ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಆದೇಶ ಜಾರಿಯಲ್ಲಿರುತ್ತದೆ.
ನೈಟ್ ಕರ್ಫ್ಯೂ ಇದ್ದರೂ ಹಲವು ವಿನಾಯಿತಿಗಗಳನ್ನು ನೀಡಲಾಗಿದೆ. ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್, ರೈಲು, ಆಟೋ, ಓಲಾ-ಉಬರ್ ಕ್ಯಾಬ್, ಸರಕು-ಸಾಗಾಣಿಕೆ ಟ್ರಕ್, ಇಂದು ರಾತ್ರಿಯಿಡಿ ಕ್ರಿಸ್‍ಮಸ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ಹೊಸ ವರ್ಷಾಚರಣೆ, ಮದ್ಯದಂಗಡಿ ಓಪನ್ ಸೇರಿದಂತೆ ಎಲ್ಲದಕ್ಕೂ ವಿನಾಯಿತಿ ನೀಡಲಾಗಿದೆ.
ಆದರೆ, ರಾತ್ರಿ 11 ಗಂಟೆ ನಂತರ ಜನಸಂಚಾರ ತಡೆಯುವ ಸಲುವಾಗಿ ನೈಟ್ ಕರ್ಫ್ಯೂ ಹೇರಲಾಗಿದೆ ಎನ್ನುತ್ತದೆ ಸರ್ಕಾರದ ಆದೇಶ.
ಕಾಟಾಚಾರದ ನೈಟ್ ಕರ್ಫ್ಯೂ ಹೇರಿ ನಗೆಪಾಟಲಿಗೀಡಾಯ್ತು..?
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ನೈಟ್ ಕರ್ಫ್ಯೂ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಆದೇಶ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಈಡಾಗಿದೆ. ರಾತ್ರಿ 11 ಗಂಟೆ ನಂತರ ಕೊರೊನಾ ವೈರಸ್ ಓಡಾಡುತ್ತಾ, ಅದೇನು ಗೂಬೆನಾ ಸೇರಿದಂತೆ ಸರ್ಕಾರದ ಅವೈಜ್ಞಾನಿಕ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನರು ಹುರಿದು ಮುಕ್ಕುತ್ತಿದ್ದಾರೆ.

ಇಂತಹ ಅವೈಜ್ಞಾನಿಕ ಐಡಿಯಾವನ್ನು ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವ ಸುಧಾಕರ್‍ಗೆ ಕೊಟ್ಟವರು ಯಾರು ? ವೈದ್ಯರು, ತಜ್ಞರ ಅಭಿಪ್ರಾಯ ಪಡೆದು ನೈಟ್ ಕರ್ಫ್ಯೂ ನಿರ್ಧಾರಕ್ಕೆ ಬಂದರಾ ? ರಾತ್ರಿ ಹೊತ್ತಲ್ಲಿ ಬರುವ ಕೊರೊನಾ ಹಗಲಿನಲ್ಲಿ ಬರಲ್ಲವೇ ? ರಾತ್ರಿ 11 ಗಂಟೆ ನಂತರ ಜನರು ಓಡಾಡಲ್ಲ, ರಾತ್ರಿ ಶ್ರೀಮಂತರು ಪಾರ್ಟಿ ಮಾಡ್ತಾರೆ, ಅವರನ್ನು ಕಂಟ್ರೋಲ್ ಮಾಡಲು ಕರ್ಫ್ಯೂ ಹೇರಿದ್ದಾರೆಯೇ,
ಇದರಿಂದ ಜನಸಾಮಾನ್ಯರಿಗೆ ಪ್ರಯೋಜನ ಏನು ? ಮತ್ತೆ ರಾತ್ರಿ ಪಾಳಿ ಶುರು ಹಚ್ಚಿಕೊಂಡ ಕೊರೊನಾ ವೈರಸ್ ? ಹೊಸ ಹೈಸ್ಪೀಡ್ ವೈರಸ್ ರಾತ್ರಿ 11ರಿಂದ ಬೆಳಿಗ್ಗೆ 5ರ ಅವಧಿಯಲ್ಲಿ ಮಾತ್ರ ದಾಳಿ ಮಾಡುತ್ತದೆ ಎಂದು ಯಾರಾದರೂ ನಿಮ್ಮ ಸಲಹಾ ತಂಡಕ್ಕೆ ಅಥವಾ ಇಂಟೆಲಿಜೆಂಟ್ಸ್ ಟೀಂಗೆ ಗೊತ್ತಾಗಿದೆಯಾ ?..ಹೀಗೆ ಫೇಸ್‍ಬುಕ್, ಟ್ವಿಟರ್‍ನಲ್ಲಿ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಜನರು ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








