ಮಂಗಳೂರು, ಜೂನ್ 9 : ದೇಶಾದ್ಯಂತ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಹಲವಾರು ರಾಜ್ಯದಲ್ಲಿ ಪ್ರಾರ್ಥನಾ ಮಂದಿರಗಳ ಬಾಗಿಲು ತೆರೆದಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ದೊರಕಿದೆ. ಕೇರಳದಲ್ಲಿ ಇಂದಿನಿಂದ ಭಕ್ತರಿಗಾಗಿ ದೇವಸ್ಥಾನಗಳ ಬಾಗಿಲು ತೆರೆಯಲಿದೆ.
ಕರ್ನಾಟಕ ಕೇರಳ ಗಡಿ ಭಾಗದಲ್ಲಿರುವ ಮಧೂರು ಕ್ಷೇತ್ರದಲ್ಲಿ ಕೂಡ ಇಂದಿನಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುಮತಿ ನೀಡಿದ್ದು, ಭಕ್ತಾಧಿಗಳು ಕಡ್ಡಾಯವಾಗಿ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.
ಮಾರ್ಗಸೂಚಿಗಳು
ದೇವರ ದರ್ಶನ ಸಮಯ – ಬೆಳಿಗ್ಗೆ 6.30 ರಿಂದ 7.30
ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 11.00 ಗಂಟೆ
ಸಾಯಂಕಾಲ 6.00 ರಿಂದ 7.00 ತನಕ
ಕ್ಷೇತ್ರದಲ್ಲಿ ಯಾವುದೇ ರೀತಿಯ ಸೇವೆಗಳಾಗಲಿ, ಪ್ರಸಾದ ವಿತರಣೆಯಾಗಲಿ, ಪ್ರಾರ್ಥನೆಗಳು, ಅನ್ನದಾನ ಇರುವುದಿಲ್ಲ
ಪೂಜಾ ಸಮಯದಲ್ಲಿ ಭಕ್ತರಿಗೆ ಕ್ಷೇತ್ರಾಂಗಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ
ಹಣ್ಣುಕಾಯಿ ಸೇರಿದಂತೆ ಹೊರಗಿನ ಯಾವುದೇ ಸಾಮಗ್ರಿಗಳನ್ನು ಕ್ಷೇತ್ರದಲ್ಲಿ ಸ್ವೀಕರಿಸಲಾಗುವುದಿಲ್ಲ.
ಭಕ್ತರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿರಬೇಕು
ಕ್ಷೇತ್ರಕ್ಕೆ ಬರುವ ಭಕ್ತರು ಕೈಯನ್ನು ಶುಚಿಗೊಳಿಸಿದ ಬಳಿಕ ತಮ್ಮ ಹೆಸರು, ಫೋನ್ ನಂಬರ್ ಗಳನ್ನು ದೇವಾಲಯದ ಪುಸ್ತಕದಲ್ಲಿ ನಮೂದಿಸಬೇಕು.
ಕ್ಷೇತ್ರದ ಒಳಗಿನ ವಿಗ್ರಹ, ಧ್ವಜ ಸ್ಥಂಭ, ಗಂಟೆ, ಬಲಿಕಲ್ಲುಗಳು ಇತ್ಯಾದಿ ಯಾವುದನ್ನು ಸ್ಪರ್ಶಿಸಬಾರದು.
ದೇವಸ್ಥಾನ ಪ್ರವೇಶಿಸುವ ಭಕ್ತರು ದೇವರ ದರ್ಶನವನ್ನು ಮಾಡಿ ಬಳಿಕ ಕ್ಷೇತ್ರಾಂಗಣದಿಂದ ಹೊರಹೋಗಬೇಕು.
ಕ್ಷೇತ್ರದ ಒಳಗೆ ಕುಳಿತುಕೊಳ್ಳುವುದನ್ನು, ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.
10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಗೆ, ಗರ್ಭಿಣಿಯರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಕ್ಷೇತ್ರ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ.
ಸಾಮೂಹಿಕ ಅಂತರ ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು
ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.