ಜೂನ್ ತಿಂಗಳಿನಲ್ಲಿ 11 ಬಾರಿಗೆ ಇಂಧನ ಬೆಲೆ ಏರಿಕೆ
ನವದೆಹಲಿ : ದೇಶದಲ್ಲಿ ಇಂಧನ ಬೆಲೆ ಏರಿಕೆ ಮುಂದುವರೆದಿದ್ದು, ಇಂದು ಒಂದು ಲೀಟರ್ ಪೆಟ್ರೋಲ್ 30 ಪೈಸೆ ಹಾಗೂ ಡೀಸೆಲ್ ಗೆ 27 ರಿಂದ 29 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಜೂನ್ ತಿಂಗಳಲ್ಲಿ 11 ಬಾರಿ ಇಂಧನ ದರ ಏರಿಕೆಯಾಗಿದೆ.
ಇಂದಿನ ಬೆಲೆ ಏರಿಕೆಯೊಂದಿಗೆ ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ 103.36 ರೂ., ಡೀಸೆಲ್ 95.44 ರೂಪಾಯಿಗೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 97.22 ರೂ., ಡೀಸೆಲ್ ದರ 87.97 ರೂಪಾಯಿ ಇದೆ.
ಪೆಟ್ರೋಲ್ ದರ ಕೊಲ್ಕತ್ತಾದಲ್ಲಿ 97.12 ರೂ., ಚೆನ್ನೈನಲ್ಲಿ 98.40 ರೂ., ನೋಯ್ಡಾದಲ್ಲಿ 94.49 ರೂ., ಬೆಂಗಳೂರಿನಲ್ಲಿ 100.47 ರೂ.,
ಭುವನೇಶ್ವರದಲ್ಲಿ 98.21 ರೂ., ಚಂಡೀಗಢದಲ್ಲಿ 93.50 ರೂ., ಹೈದರಾಬಾದ್ನ ಲ್ಲಿ 101.04 ರೂ., ಜೈಪುರದಲ್ಲಿ 104.62 ರೂ.,
ಲಕ್ನೋದಲ್ಲಿ 94.60 ರೂ., ಪಾಟ್ನಾದಲ್ಲಿ 99.28 ರೂ., ತಿರುವನಂತಪುರದಲ್ಲಿ 99.20 ರೂ. ಇದೆ.