ಇಂದು ಜಿ.ಮಾದೇಗೌಡರ ಅಂತ್ಯಕ್ರಿಯೆ : ಅಂತಿಮ ದರ್ಶನಕ್ಕೆ ವ್ಯವಸ್ಥೆ
ಮಂಡ್ಯ : ಹಿರಿಯ ರಾಜಕಾರಣಿ, ಕಾವೇರಿ ಹೋರಾಟಗಾರ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ರಾತ್ರಿಯೇ ಆಸ್ಪತ್ರೆಯಿಂದ ಮಂಡ್ಯದ ನಿವಾಸಕ್ಕೆ ತರಲಾಗಿದೆ. ಅಲ್ಲಿ ಜನರಿಗೆ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿ.ಮಾದೇಗೌಡರ ನಿಧನದ ಸುದ್ದಿ ತಿಳಿದು ರಾತ್ರಿಯೇ ನೂರಾರು ಜನರು ಆಸ್ಪತ್ರೆಗೆ ಜಮಾಯಿಸಿ ಅಂತಿಮ ದರ್ಶನ ಪಡೆದರು.
ಬಳಿಕ ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀ ರವನ್ನು ಕುಟುಂಬಸ್ಥರು ಮಂಡ್ಯದ ಬಂದೀಗೌಡ ಬಡಾವ ಣೆಯಲ್ಲಿರುವ ಮಾದೇಗೌಡರ ನಿವಾಸಕ್ಕೆ ತಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ಇನ್ನು ಬೆಳಿಗ್ಗೆ 10 ಗಂಟೆ ನಂತರ ಪಾರ್ಥಿವ ಶರೀರವನ್ನು ಗಾಂಧಿಭವನದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು.
ಬಳಿಕ ಅವರ ಹುಟ್ಟೂರು ಗುರುದೇವರಹಳ್ಳಿಗೆ ಪಾರ್ಥಿವ ಕೊಂಡೊಯ್ದು ಬಳಿಕ ಭಾರತೀ ಕಾಲೇಜಿನಲ್ಲೂ ಕೂಡ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಹನುಮಂತನಗರ ದಲ್ಲಿ 3 ಗಂಟೆಗೆ ಅಂತಿಮವಾಗಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಮಾದೇಗೌಡ ಕುಟುಂಬ ಮೂಲಗಳು ತಿಳಿಸಿವೆ.