G.T.Deve Gowda | ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಕೊನೆಯ ಆಸೆ ಇದೆ
ಮೈಸೂರು : ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಾ ಎಂದು ಕರೆದಿಲ್ಲ. ಬಿಜೆಪಿ ಮಾತ್ರ ಹೋಗಬೇಡ ಅಂತ ಹೇಳಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಕಾಂಗ್ರೆಸ್ ಬಾ ಎಂದು ಕರೆದಿಲ್ಲ.
ಬಿಜೆಪಿ ಮಾತ್ರ ಹೋಗಬೇಡ ಅಂತ ಹೇಳಿದ್ದಾರೆ. ಅವರು ಏನು ಹೇಳಿದ್ದಾರೆ ಅದನ್ನೇ ಈಗ ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ.
ನನ್ನ ನಿರ್ಧಾರ ಏನು ಎಂಬುದನ್ನು ಎರೆಡು ಮೂರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಕಳೆದ ಬಾರಿ ಸೋತಿರುವ ಕಾರಣ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವ ವಿಚಾರದಲ್ಲಿ ಅವರಿಗೆ ಆತಂಕ ಇದೆ.
ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಕೊನೆಯ ಆಸೆ ಇದೆ. ಹೀಗಾಗಿ ಸೇಫ್ ಪ್ಲೇಸ್ ನೋಡ್ತಾ ಇದ್ದಾರೆ.
ಅರ್ಜಿ ಹಾಕಿ ಗೆದ್ದು ಬರವಂತಹ ಕ್ಷೇತ್ರ ಹುಡುಕುತ್ತಿದ್ದಾರೆ.
ಅವರು ಚುನಾವಣೆಯಲ್ಲಿ ರಾಜ್ಯ ಪ್ರವಾಸ ಮಾಡಬೇಕಿದೆ.
ಇದಕ್ಕಾಗಿ ಅಳೆದು ತೂಗಿ ಲೆಕ್ಕ ಹಾಕುತ್ತಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.








