Gaalipata 2 : ಗಾಳಿಪಟ 3 ಬರುತ್ತಾ ಪ್ರಶ್ನೆಗೆ ಯೋಗರಾಜ್ ಭಟ್ ಹೇಳಿದ್ದೇನು..??
ಕನ್ನಡ ಚಿತ್ರರಂಗದಲ್ಲಿ ಸೀಕ್ವೆಲ್ ಗೆ ತೆಗೆದ ಚಿತ್ರಗಳು ಗೆದಿದ್ದಿರುವು ತುಂಬಾ ಕಡಿಮೆ ಅದರಲ್ಲಿ ಹಿಟ್ ಅಂತ ಇತ್ತೀಚಿಗೆ ಅನ್ನಿಸಿಕೊಂಡಿದ್ದು ಒಂದು ಕೆಜಿಎಫ್ ಇನ್ನೊಂದು ಗಾಳಿಪಟ 2. ಯೋಗರಾಜ್ ಭಟ್ ಮತ್ತೆ ಗಣಿ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದು, ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿದೆ. ಎರಡನೇ ಭಾಗ ಗೆದ್ದ ನಂತರ ಇದೀಗ ಗಾಳಿಪಟ 3ಕ್ಕೆ ಒತ್ತಾಯ ಕೇಳಿಬರುತ್ತಿದ್ದು, ಗಾಳಿಪಟ 3 ಸಿನಮಾ ಕೂಡ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸಿನಿಮಾತಂಡ ಸಿನಿಮಾದ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು.. ಆಗ ಗಾಳಿಪಟ 3 ಕುರಿತಾದ ಪ್ರಶ್ನೆಗೆ ಯೋಗರಾಜ್ ಭಟ್ಟರು ಉತ್ತರಿಸಿದ್ದು ಹೀಗೆ…!!
‘ಗಾಳಿಪಟ , ಗಾಳಿಪಟ 2 ಸಿನಿಮಾಗಳ ಸಕ್ಸಸ್ ನಂತರ, ಗಾಳಿಪಟ 3 ಗಾಗಿ ಒತ್ತಾಯ ಕೇಳಿಬಂದಿದೆ. ಆ ರೀತಿ ಪ್ಲ್ಯಾನ್ ನಮಗೂ ಇದೆ ಎನ್ನುವ ಮೂಲಕ ಗಾಳಿಪಟ 3 ಬರುವ ಸುಳಿವು ನೀಡಿದ್ದಾರೆ ವಿಕಟಕವಿ ಯೋಗರಾಜ್ ಭಟ್ಟರು..







