Gadaga ಗದಗ APMC ಆವರಣದ ನಿರ್ಜನ ಪ್ರದೇಶದಲ್ಲಿ ರಟ್ಟಿನ ಡಬ್ಬಿಯೊಂದರಲ್ಲಿ ಬೇವಿನ ಸೊಪ್ಪು, ಕೊಂಬೆಗಳ ಕೇಳಗೆ ರಟ್ಟಿನ ಡಬ್ಬದಲ್ಲಿ 3 ದಿನದ ಹಸುಗೂಸನ್ನು ಅಮಾನುಷವಾಗಿ ಬಿಟ್ಟುಹೋದ ಘಟನೆ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ರಟ್ಟಿನ ಡಬ್ಬವೊಂದರಲ್ಲಿ ಮಗುವನ್ನು ಬಟ್ಟೆಯೊಂದರಲ್ಲಿ ಮುಚ್ಚಿಡಲಾಗಿತ್ತು. ಆಕಾಶ್ ಎಂಬ ಯುವಕ ಮಗು ಅಳುವ ಸದ್ದು ಕೇಳಿಸಿಕೊಂಡ ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ.
ಕರೆಗೆ ತಕ್ಷಣ ಸ್ಪಂದಿಸಿ ಬಂದ ಪೊಲೀಸ್ ಕಾನಸ್ಟೇಬಲ್ ಪರಶುರಾಮ ದೊಡ್ಡಮನಿ, ಅಶೋಕ್ ತಕ್ಷಣ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ಧಾಕಲಿಸಿ ಸಣ್ಣಮಕ್ಕಳ ತುರ್ತು ನಿಗಾ ಘಟಕದಲ್ಲಿ (ಎನ್ಐಸಿಯು) ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು ಅದೃಷ್ಟ ವಷಾತ್ ಮಗು ನಾಯಿ, ಹಂದಿಗಳ ಪಾಲಾಗಿಲ್ಲ ಎಂದು ಸ್ಥಳಿಯರು ಆತಂಕ ವ್ಯಕ್ತ ಪಡಿಸಿದ್ದಾರೆ
ಮಗುವಿನ ಹೆತ್ತವರನ್ನು ಹುಡುಕಲು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಪುಟ್ಟ ಮಗುವನ್ನು ರಟ್ಟಿನ ಡಬ್ಬಿಯಲ್ಲಿ ಎಸೆದು ಹೋದ ನೀಚರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪೊಲೀಸರಿಗೆ ವಿಷಯ ತಿಳಿಸಿದ ಆಕಾಶ್ ಎಂಬ ಯುವಕ ಮತ್ತು ತುರ್ತಾಗಿ ಸ್ಪಂದಿಸಿದ ಗದಗ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .
ಖಾಸಗಿ ಆಸ್ಪತ್ರೆಗೆ ಸೇರಿಸಿದ ವಿಷಯ ತಿಳಿದು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಬಂದಿದ್ದರೆ , ಮಗುವಿನ ಆರೋಗ್ಯದ ಮಾಹಿತಿ ಪಡೆದು. ಮಗು ಆರೋಗ್ಯವಾಗಿದೆ, ಪ್ರಾಣಾಪಾಯದಿಂದ ಪಾರಾಗಿದೆ ಎಂಬ ವೈದ್ಯರ ಕೇಳಿ ಸಂತಸ ವ್ಯಕ್ತ ಪಡಿಸಿದ್ದಾರೆ
ಮಗುವನ್ನು ನಂತರ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸರು ಒಪ್ಪಿಸಿದ್ದಾರೆ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗನ ಜಿಮ್ಸ್ ಆಸ್ಪತ್ರೆಯ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಕರೆದ್ಯೊಯ್ದಿದ್ದಾರೆ.