Gadaga : ಸೂರು ನೀಡುವಂತೆ ಬೇಡಿಕೊಳ್ಳುತ್ತಿರುವ 105 ವರ್ಷದ ಅಜ್ಜಿ….
ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಮನೆ ಸಂಪೂರ್ಣ ಹಾಳಾಗಿದೆ ಹಾಗಾಗಿ ಸೂರು ನೀಡಿ ಎಂದು 105 ವರ್ಷದ ಅಜ್ಜಿಯೊಬ್ಬರು ಪರಿಹಾರಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ಎರಡು ತಿಂಗಳಿನಿಂದ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರೂ ಯಾರೊಬ್ಬರು ತಿರುಗಿ ನೋಡುತ್ತಿಲ್ಲ.
ಗದಗ ಜಿಲ್ಲೆ ರೋಣ ತಾಲೂಕಿನ ನಾಗರಾಳ ಗ್ರಾಮದ 105 ವರ್ಷದ ಅಡಿವೆವ್ವ ಬಾರಕೇರ್ ಅಜ್ಜಿಯ ಗೋಳನ್ನ ಕೇಳುವವರು ಯಾರು ಇಲ್ಲದಾಗಿದೆ. ನಾಗರಾಳ ಗ್ರಾಮದಲ್ಲಿ ಚೆನ್ನಾಗಿರೋ ಮನೆಗಳಿಗೆ ಪರಿಹಾರ ಬಂದಿದೆ, ಬಿದ್ದ ಮನೆಗೆ ಬಂದಿಲ್ಲಾ ಎಂದು ಆಕ್ರೋಶ ಬಿದ್ದ ಮನೆಯಲ್ಲಿ ವಾಸಮಾಡುತ್ತಿರುವ ಹಿರಿಯ ಜೀವ ಅವಲತ್ತುಕೊಂಡಿದೆ.
ಬಿದ್ದ ಮನೆಗೆ ಪರಿಹಾರ ನೀಡುವಲ್ಲಿ ಗೊಲ್ಮಾಲ್ ನಡೆದಿದೆ ಎಂದು ಆರೋಪ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೇರ್ ಮಾಡ್ತಾಯಿಲ್ಲಾ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Gadaga: A 105-year-old grandmother who is begging for a roof…