Gadaga | ಪ್ರವಾಹದಲ್ಲಿ ಸಿಲುಕಿ ವೃದ್ಧೆ ಪರದಾಟ
ಗದಗ : ಜಿಲ್ಲೆಯಲ್ಲಿ ಮಳೆ ಆಗಾಗ ಬಂದು ಹೋಗುತ್ತಿದ್ದರೂ, ಒಂದಿಲ್ಲೊಂದು ಅವಾಂತರಗಳು ಮಾತ್ರ ಮುಂದುವರೆದಿವೆ.
ನರಗುಂದ ತಾಲೂಕಿನಲ್ಲಿ ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ವೃದ್ಧೆಯೋರ್ವಳನ್ನ ನಿನ್ನೆ ಸಂಜೆ ರಕ್ಷಣೆ ಮಾಡಲಾಗಿದೆ.
ನರಗುಂದ ತಾಲೂಕಿನ ಸುರಕೋಡ ಗ್ರಾಮದ ವೃದ್ಧೆ ಚಿನ್ನವ್ವ ಮಲಕಾಜಪ್ಪನವರ, ಹೆಸರು ಕಾಳು ಬಿಡಿಸಲು ಹೊಲಕ್ಕೆ ತೆರಳಿದ್ದಳು.
ಈ ವೇಳೆ ಬೆಣ್ಣೆಹಳ್ಳದ ಪ್ರವಾಹ ಏಕಾಏಕಿ ಉಕ್ಕಿಬಂದ ಹಿನ್ನೆಲೆ ವೃದ್ಧೆಗೆ ಯಾವುದೇ ದಾರಿ ತೋಚದೆ ಪ್ರವಾಹದ ಮಧ್ಯೆ ಸಿಲುಕಿಕೊಂಡಿದ್ದಳು.

ತಕ್ಷಣ ಜಮೀನಿನ ಸಮೀಪದಲ್ಲಿದ್ದ ಅದೇ ಗ್ರಾಮದ ಯಂಕಪ್ಪ ಸುಗ್ಗಿ ಹಾಗೂ ಲಕ್ಷ್ಮಣ ಸಿರಸಂಗಿ ಅವರು ವೃದ್ದೆಯನ್ನ ರಕ್ಷಣೆ ಮಾಡಿದ್ದಾರೆ.
ರಾಜ್ಯಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ಇನ್ನೂ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದರಂತೆ ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಜೊತೆಗೆ ಹಲವು ಗ್ರಾಮಗಳು ನಡುಗಡ್ಡೆಗಳಾಗಿದ್ದು, ಜಮೀನುಗಳು ಜಲಾವೃತಗೊಂಡಿವೆ.








