ಸಾವಿನ ದವಡೆಯಲ್ಲಿದ್ದ ಮಗುವಿಗೆ ಮರುಜನ್ಮ ನೀಡಿದ ಗದಗ ಜಿಮ್ಸ್ ವೈದ್ಯರು….
ಸರ್ಕಾರಿ ಆಸ್ಪತ್ರೆಗಳೆಂದರೇ ಮೂಗು ಮುರಿಯುವರೆ ಜಾಸ್ತಿ, ಅಲ್ಲಿನ ಸೌಕರ್ಯಗಳು ಮತ್ತು ಚಿಕಿತ್ಸೆಯ ಗುಣಮಟ್ಟದಿಂದಾಗಿ ಖಾಸಗಿ ಆಸ್ಪತ್ರೆಗಳ ಕಡೆ ಒಲವು ತೋರಿಸುವವರೆ ಹೆಚ್ಚು. ಆದರೇ ಇಲ್ಲೊಂದು ಘಟನೆ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನ ಪ್ರತ್ಯಕ್ಷ ದೇವರನ್ನಾಗಿ ಮಾಡಿದೆ.
ಗದಗ ಜಿಮ್ಸ್ ಆಸ್ಪತ್ರೆಯ ವೈದ್ಯರು ಸತತ ಮೂರು ತಿಂಗಳುಗಳ ಕಾಲ ಪ್ರರಿಶ್ರಮ ಪಟ್ಟು ಪವಾಡದಂತೆ ಮಗುವಿಗೆ ಮರುಜನ್ಮ ನೀಡಿದ್ದಾರೆ. ಗದಗ ತಾಲೂಕಿನ ದಂದೂರು ಗ್ರಾಮದ ರಾಜೇಶ್ವರಿ ಚಿಕ್ಕನಗೌಡ ಎಂಬ ಮಹಿಳೆ ಖಾಸಗಿ ಆಸ್ಪತ್ರೆಗೆ ಅವಧಿಗೆ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಕೇವಲ 24 ವಾರಗಳು ಕಳೆದಿದ್ದರಿಂದ ಕೂಸುಗಳ ಬೆಳವಣಿಗೆ ಕುಠಿತವಾಗಿತ್ತು. ಹೀಗಾಗಿ ಹುಟ್ಟಿದ ಎರಡೇ ದಿನಕ್ಕೆ ಹೆಣ್ಣು ಮಗು ಸಾವನ್ನಪ್ಪಿತ್ತು. ಮತ್ತೊಂದು ಗಂಡು ಮಗು ಕೂಡ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುತ್ತಿತ್ತು.
ಮಗುವಿನ ತೂಕ ಕೇವಲ 700 ಗ್ರಾಂ ಮಾತ್ರ ಇತ್ತು. ಶ್ವಾಸಕೋಶದ ಬೆಳವಣಿಗೆ ಸೇರಿದಂತೆ ನಾನಾ ಅಂಗಗಳು ಬೆಳೆಯದ ಕಾರಣ ಮಗು ಬದುಕುಳಿಯುವ ಆಸೆಯನ್ನ ಪೋಷಕರು ಕೈಬಿಟ್ಟಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಲು ಸಾಧ್ಯವಾಗದೇ ಗದಗ ಜಿಮ್ಸ್ ಆಸ್ಪತ್ರೆಗೆ ಕರೆತಂದು ಚಕಿತ್ಸೆ ಕೊಡಿಸಲು ಮುಂದಾಗಿದ್ದರು. ಕೊನೆಯಲ್ಲಿ ಜಿಮ್ಸ್ ವೈದ್ಯರು ಪವಾಡವನ್ನೇ ಮಾಡಿದ್ದಾರೆ.
ಕೃತಕ ಗರ್ಭಧ ವಾತಾವರಣ ಸೃಷ್ಟಿ ಮಾಡಿ ಗರ್ಭದಲ್ಲಿ ಯಾವ ರೀತಿ ಮಗು ಬೆಳೆಯುತ್ತೋ ಅದೇ ರೀತಿ ವಾತಾವರಣ ಸೃಷ್ಟಿ ಮಾಡಿ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ ವೈದ್ಯರು. ಸತತ ಮೂರು ತಿಂಗಳ ಕಾಲ ಜಿಮ್ಸ್ ಕಾಂಗರೂ ಮದರ್ ಕೇರ್ ಘಟಕದಲ್ಲಿ ವಿಶೇಷ ಚಿಕಿತ್ಸೆ ನೀಡಲಾಗಿದೆ. ಆರಂಭದಲ್ಲಿ ಶ್ವಾಸಕೋಶ ಬೆಳವಣಿಗೆಯಾಗೋವರೆಗೂ ವೆಂಟಿಲೇಟರ್ ಮೇಲೆ ಶ್ವಾಸಕೋಶದ ಜಾಗದವರೆಗೆ ಪೈಪ್ ಗಳನ್ನ ಹಾಕಿ ಆಕ್ಸಿಜನ್ ಪೂರೈಕೆ ಮಾಡ್ತಾರೆ. ಈರೀತಿ ಹಲವು ಚಿಕಿತ್ಸೆಗಳ ನಂತರ ಮಗು ಮತ್ತೆ ತಾಯಿ ಮಡಿಲು ಸೇರುವಂತೆ ಮಾಡಿದ್ದಾರೆ.
Gadaga : Gadaga Jims doctor who reborn a child who was in the jaws of death.