ಲಾಕ್ ಡೌನ್ – ಕೋಳಿ ನೆಪ ಹೇಳಿಕೊಂಡು ಹೊರಬಂದ ಭೂಪ – ಕಥೆ ಕೇಳಿ ಶಾಕ್ ಆದ ಪೊಲೀಸ್..!
ಗದಗ : ಲಾಕ್ ಡೌನ್ ನಿಂದ ತಪ್ಪಿಸಿಕೊಳ್ಳಲು ಜನ ಏನೇನೋ ನೆಪ ಹೇಳಿಕೊಳ್ತಿದ್ದಾರೆ. ಆದ್ರೆ ಇಲ್ಲೊಬ್ಬ ಕೋಳಿ ನೆಪ ಹೇಳಿದ್ದು, ಪೊಲೀಸರೇ ಒಮದು ಕ್ಷಣ ಕಕ್ಕಾಬಿಕ್ಕಿಯಾಕಿದ್ದಾರೆ. ಹೌದು.. ಕೊರೊನಾ ಹಿನ್ನೆಲೆಯಲ್ಲಿ ಗದಗ ಜಿಲ್ಲಾದ್ಯಂತ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಈ ನಡುವೆ ವ್ಯಕ್ತಿಯೋರ್ವ ಕೋಳಿಯ ನೆಪ ಹೇಳಿಕೊಂಡು ಹೊರಗೆ ಬಂದಿದ್ದಾನೆ. ಕೋಳಿಗೆ ಬೇಧಿಯಾಗ್ತಿದೆ. ಬೆಳಿಗ್ಗೆಯಿಂದ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ.
ಈ ಕೋಳಿ ಸದಾಕಾಲ ನನ್ನೊಂದಿಗೆ ಇರುತ್ತಿತ್ತು. ಕುಂತರೆ, ನಿಂತರೂ ಇದು ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಇದಕ್ಕೆ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಟೆನ್ಷನ್ ಆಗಿ, ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟಿದ್ದೇನೆ ಎಂದು ಕೋಳಿಯ ಮಾಲೀಕ ಹೇಳಿದ್ದಾನೆ. ಆತ ಕೊಟ್ಟ ಕಾರಣ ಕೇಳಿ ಪೊಲೀಸರು ನಕ್ಕಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.