Gadaga : ಲೈಂಗಿಕ ಕಿರುಕುಳ ಆರೋಪ – ಶ್ರೀಕೃಷ್ಣದೇವರಾಯ ವಿವಿ ಇಂಗ್ಲೀಷ್ ಪ್ರೊಫೆಸರ್ ಅಮಾನತು…
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೋಫೆಸರ್ ನ್ನ ಅಮಾನತು ಮಾಡಲಾಗಿದೆ. ಇಂಗ್ಲೀಷ್ ಪ್ರೊಫೆಸರ್ ಡಾ. ಚಾಂದ್ಭಾಷಾ ಎಂ. ಸೇವೆಯಿಂದ ಅಮಾನತು ಮಾಡಿ ವಿಶ್ವ ವಿದಾಲಯ ಆದೇಶಿಸಿದೆ.
ವಿ.ಎಸ್.ಕೆ ವಿವಿ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯ ಪಿಜಿ ಸೆಂಟರ್ ನಲ್ಲಿ ಪ್ರೊಫೆಸರ್ ಆಗಿದ್ದ ಚಾಂದ್ ಭಾಷಾ ಪಿ ಹೆಚ್ ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವುದಾಗಿ ನವೆಂಬರ್ 7, 2022 ರಂದು ಲೈಂಗಿಕ ಕಿರುಕುಳದ ದೂರನ್ನ ದಾಖಲಿಸಲಾಗಿತ್ತು.
ಪಿ ಎಚ್ ಡಿ ವಿದ್ಯಾರ್ಥಿನಿ ಕರ್ನಾಟಕ ಸಿವಿಸ್ ಸೇವೆಗಳ ಕಾಯ್ದೆ ಮತ್ತು ಕಾನೂನಾತ್ಮಕವಾಗಿ ದೂರು ದಾಖಲಿಸಿದ್ದರು. ಲಿಖಿತ ದೂರಿನ ಹಿನ್ನಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಸಮಿತಿ ಸಿಂಡಿಕೇಟ್ ಸಭೆಗೆ ವರದಿಸಲ್ಲಿಸಿತ್ತು. ಸಿಂಡಿಕೇಟ್ ಸಭೆಯ ನಿರ್ಣಯದ ಪ್ರಕಾರ ಡಾ. ಚಾಂದ್ಭಾಷ ಎಂ. ಅವರನ್ನ ಸೇವೆಯಿಂದ ಅಮಾನತು.
Gadaga: Sexual Harassment Allegation – Srikrishna Devaraya VV English Professor Suspended…