Gambhir | ಬ್ಲಾಕ್ ಬ್ಲಸ್ಟರ್ ಪಂದ್ಯಕ್ಕೆ ಕಾರ್ತಿಕ್ ಗಿಲ್ಲ ಅವಕಾಶ..
ದಾಯದಿಗಳ ಸಮರಕ್ಕೆ ಸಮಯ ಹತ್ತಿರವಾಗಿದೆ. ಅಕ್ಟೋಬರ್ 23 ರಂದು ಮೆಲ್ ಬೋರ್ನ್ ವೇದಿಕೆಯಾಗಿ ಪಾಕಿಸ್ತಾನ ವಿರುದ್ಧ ಭಾರತ ಮುಖಾಮುಖಿಯಾಗಲಿದೆ.
ಈ ಹೈ ವೋಲ್ಟೇಜ್ ಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ ಎಲೆವೆನ್ ಅನ್ನು ಭಾರತದ ಮಾಜಿ ಆಟಗಾರರು ಅಂದಾಜಿಸುತ್ತಿದ್ದಾರೆ.
ಈ ಸಾಲಿನಲ್ಲಿ ಟೀಂ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್ ಸೇರಿದ್ದು, ಈ ಬ್ಲಾಕ್ ಬ್ಲಸ್ಟರ್ ಮ್ಯಾಚ್ ಗಾಗಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಅನ್ನು ಗಂಭೀರ್ ಅಂದಾಜಿಸಿದ್ದಾರೆ.
ಪಾಕ್ ವಿರುದ್ಧದ ಪಂದ್ಯಕ್ಕಾಗಿ ಗೌತಮ್ ಗಂಭೀರ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ.
ಗಂಭೀರ್ ಆಯ್ಕೆ ಮಾಡಿದ ತಂಡದಲ್ಲಿ ದಿನೇಶ್ ಕಾರ್ತಿಕ್ ಗೆ ಅವಕಾಶ ಸಿಕ್ಕಿಲ್ಲ.
ಇನ್ನು ಗಂಭೀರ್ ತಂಡದಲ್ಲಿ ಓಪನರ್ ಗಳಾಗಿ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಇದ್ದು, ಮೂರನೇ, ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಇದ್ದಾರೆ.

ಐದನೇ ಸ್ಥಾನದಲ್ಲಿ ರಿಷಬ್ ಪಂತ್ ಇದ್ದು, ಆಲ್ ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಅವರನ್ನ ಗಂಭೀರ್ ಆಯ್ಕೆ ಮಾಡಿದ್ದಾರೆ.
ಇನ್ನು ಸ್ಪೆಷಲಿಸ್ಟ್ ಬೌಲರ್ ಆಗಿ ಅಶ್ವಿನ್ ಬದಲಿಗೆ ಚಹಾಲ್, ಫಾಸ್ಟ್ ಬೌಲರ್ ಗಳ ವಿಭಾಗದಲ್ಲಿ ಹರ್ಷಲ್ ಪಟೇಲ್, ಶಮಿ ಜೊತೆಗೆ ಭುವನೇಶ್ವರ್ ಕುಮಾರ್ ಅಥವಾ ಅರ್ಷ್ ದೀಪ್ ಸಿಂಗ್ ಅವಕಾಶ ಸಿಗಲಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಗೌತಮ್ ಅಂದಾಜಿಸಿರುವ ತಂಡ
ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಯುಜುವೇಂದ್ರ ಚಹಾಲ್, ಅರ್ಷ್ ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ








