ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಸೈಮನ್ ಡೌಲ್, ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ರೆಗ್ ಚಾಪೆಲ್ಗಿಂತ ಕಡಿಮೆ ಅವಧಿಯಲ್ಲಿ ಗಂಭೀರ್ ಅವರನ್ನು ವಜಾಗೊಳಿಸಲಾಗಬಹುದು ಎಂದು ಅವರು ಹೇಳಿದ್ದಾರೆ.
ಗಂಭೀರ್ ಅವರು ತಾಳ್ಮೆ ಕಳೆದುಕೊಂಡಿದ್ದಾರೆ ಎಂದು ಡೌಲ್ ಹೇಳಿದ್ದು, ಆಟಗಾರರನ್ನು ಸೆಟ್ ಮಾಡುವುದು ಮತ್ತು ಬಿಜಿಟಿಯಲ್ಲಿ ಹೇಗೆ ಆಡಬೇಕು ಎಂಬುದರ ಕುರಿತು ಮಾತನಾಡುವುದು ಬಹುಮುಖ್ಯ ಎಂದು ಅವರು ವಿವರಿಸಿದ್ದಾರೆ.
ಈ ಸರಣಿಯಲ್ಲಿ ಭಾರತ ಉತ್ತಮ ಫಲಿತಾಂಶ ದಾಖಲಿಸಿದರೆ ಸಮಸ್ಯೆ ಇಲ್ಲ, ಆದರೆ ಭಾರತ 1-4 ಅಥವಾ 0-5 ಅಂತರದಲ್ಲಿ ಸೋತರೆ, ಗಂಭೀರ್ ಅವರು ಕೋಚ್ ಆಗಿ ಮುಂದುವರಿಯಲು ಕಷ್ಟವಾಗಬಹುದು ಎಂದು ಡೌಲ್ ಅಭಿಪ್ರಾಯಪಟ್ಟಿದ್ದಾರೆ.