ಅಪ್ಪು ಹುಟ್ಟು ಹಬ್ಬಕ್ಕೆ “ಗಂಧದಗುಡಿ” ಫಸ್ಟ್ ಲುಕ್ ರಿಲೀಸ್…
ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ ‘ಜೇಮ್ಸ್’ ಬಿಡುಗಡೆಯಾಗಿದೆ. ಈ ಶುಭದಿನ ಅಪ್ಪು ಅವರ ಕನಸಿನ ಚಿತ್ರ ‘ಗಂಧದಗುಡಿ’ಯ ಫಸ್ಟ್ ಲುಕ್ ನ್ನ ಬಿಡುಗಡೆ ಮಾಡಲಾಗಿದೆ.
ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದಗುಡಿ’ ಪಿಆರ್‌ಕೆ ಪ್ರೊಡೆಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಹುಟ್ಟು ಹಬ್ಬದ ಪ್ರಯುಕ್ರ ಫಸ್ಟ್ ಲುಕ್ ಪೋಸ್ಟರ್ ನ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಲಾಗಿದೆ. ಈ ದಿನದಂದು ನಾವು ನಮ್ಮ ಪ್ರೀತಿಯ ಅಪ್ಪುವಿನ ಹುಟ್ಟುಹಬ್ಬವನ್ನು ಅವರು ಪ್ರೀತಿಸುವ ಭೂಮಿ, ಜೀವಿಗಳು, ಸಾಹಸ ಮತ್ತು ಅದ್ಭುತ ಪ್ರಜ್ಞೆ ಮೂಲಕ ಸ್ವಾಗತ ಮಾಡಿಕೊಳ್ಳುತ್ತಿದ್ದೇವೆ ಎಂದು ಇನ್‌ಸ್ಟಾದಲ್ಲಿ ಬರೆದು ಅಪ್ಪು ಲುಕ್ ರಿವಿಲ್ ಮಾಡಲಾಗಿದೆ.
https://www.instagram.com/p/CbMFZ5gvHpv/?utm_source=ig_embed&ig_rid=7b4f96a8-e893-4046-9aae-2e059531d607
ಈ ಫಸ್ಟ್ ಲುಕ್ ಪಸ್ಟ್ ನಲ್ಲಿ ಅಪ್ಪು ನಗು ಮುಖದೊಂದಿಗೆ ಪ್ರಕೃತಿಯನ್ನು ವೀಕ್ಷಿಸುತ್ತ ಜರಿ ನೀರಿನ ಮೇಲೆ ನಡೆದುಕೊಂಡು ಬರುತ್ತಿರುವ ಪೋಟೊ ಅದ್ಭುತವಾಗಿ ಮೂಡಿಬಂದಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ.
“gandhadagudi” First Look Release For appu Birthday Celebration…








